..
ಬಂದೆನವ್ವ ಭಾವಕಿಯರನ್ನೆತಂದೆನವ್ವ ಕುಶಲವಸಿಂಧುಶಯನನ ಮುಂದೆನಿಂದು ಸುದ್ದಿ ಹೇಳಿದೆನವ್ವ ಪ.
ಹರದೆಯರಿಂದ ಅಚ್ಯುತ ಹರುಷವಾದ ಮ್ಯಾಲವ್ವವರಗಿರಿವಾಸನ ಮುಂದೆ ಕರವ ಮುಗಿದು ಹೇಳಿದೆನವ್ವ 1
ಮಂದಗಮನೆಯರ ಕೋಪ ಮಂದವಾದ ಮ್ಯಾಲವ್ವಸಿಂಧುಶಯನನ ಮುಂದೆ ನಿಂದು ಸುದ್ದಿ ಹೇಳಿದೆನವ್ವ 2
ಕಾಂತೆಯರಿಂದ ಅಚ್ಯುತ ಶಾಂತನಾದ ಮ್ಯಾಲವ್ವಇಂತು ರಾಮೇಶನ ಮುಂದೆ ನಿಂದು ಸುದ್ದಿ ಹೇಳಿದೆನವ್ವ 3
****