ಮಂಗಳ ಜಯಮಂಗಳ ಶುಭ ಮಂಗಳ ಶ್ರೀ ಗುರುಮೂರ್ತಿಗೆ P
ವೇದೋದ್ಧಾರ ಶ್ರೀಮತ್ಸ್ಯಗೆ ಮಂಗಳ ಮೇದಿನಿಯ ಪೊತ್ತ ಕೂರ್ಮಗೆ ಮಂಗಳ ಕಾದಿ ಗೆದ್ದ ಶ್ರೀವರಾಹಗೆ ಮಂಗಳ ಒದಗಿ ಮೂಡಿದ ನರಸಿಂಹಗೆ ಮಂಗಳ 1
ಧರಿಯೆ ದಾನವಕೊಂಡ ವಾಮನಗೆ ಮಂಗಳ ಶೂರ ಪರಶುರಾಮಗೆ ಮಂಗಳ ಶರಣ ರಕ್ಷಕ ಶ್ರೀರಾಮಗೆ ಮಂಗಳ ಸಿರಿಯನಾಳುವ ಶ್ರೀಕೃಷ್ಣಗೆ ಮಂಗಳ 2
ಗುಹ್ಯ ಗೋಪ್ಯದಲಿಹ ಬೌದ್ದಗೆ ಮಂಗಳ ಹಯವನೇರಿದ ಕಲ್ಕಿಗೆ ಮಂಗಳ ಜಯ ಜಯ ಮಹಿಪತಿಸ್ವಾಮಿಗೆ ಮಂಗಳ ದಯುವುಳ್ಳ ಶ್ರೀದೇವಿದೇವಗೆಮಂಗಳ3
***