RAO COLLECTIONS SONGS refer remember refresh render DEVARANAMA
ನೋಡಿ ನೋಡಿ ನೋಡುದರೊಳಗೆ ನೋಡಿದ ನೋಟ ಸದ್ಭನವಾಗುವ್ಹಾಂಗ ಪ
ಮನದಿಂದಲಿ ಮನನೋಡುವ ಯೋಗ ಘನಸುಖ ತೋರುವದಿದೆ ಬ್ರಹ್ಮಭೋಗ 1
ಕಣ್ಣಿನಿಂದಲಿ ಕಣ್ಣುದೆರುವ್ಹಾಂಗ ಮಾಡಿ ಚನ್ನಾಗಿ ಉದಯವಾಗುದು ಘನ ಮೂಡಿ 2
ಭಾವ ಬಲಿದು ನೋಡುವುದು ಬಲುಚೆಂದ ಆವಾಗ ಮಹಿಪತಿಗಿದೆ ಬ್ರಹ್ಮಾನಂದ 3