ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವ ನೆಲೆಗೊಳ್ಳಿ ಸಾಧಿಸಿ ದೃಢದಲ್ಲಿ ದೈವ ಪ್ರಕಟಾಗಿ ಒಲಿವುದು ಘನದಲಿ ಪ
ಮಾಡಿ ಚಿತ್ತಶುದ್ಧ ನೋಡಿ ಸ್ವತ:ಸಿದ್ಧ ಗೂಢ ಗುಪ್ತ ಘನ ಕೈಗೂಡಿ ತಾಂ ಪ್ರಸಿದ್ದ 1
ನಡಿಯ ಪಡಕೊಳ್ಳಿ ಸದ್ಗುರು ದಯದಲಿ ಕಡೆದು ಹೋಗುವದು ಭವಪಾಶ ಮನದಲಿ 2
ಭಾವಕತಿ ಪ್ರಿಯ ಭಾನುಕೋಟಿ ಉದಯ ಪಾವನ್ನಗೈಸುತಿಹ ನೋಡಿ ಮೂಢ ಮಹಿಪತಿಯ 3
***