Showing posts with label ಸತಿಗೆ ಸ್ವಾತಂತ್ರ್ಯವ ಕೊಡದಿರು purandara vittala SATIGE SWAATANTRAVA KODADIRU. Show all posts
Showing posts with label ಸತಿಗೆ ಸ್ವಾತಂತ್ರ್ಯವ ಕೊಡದಿರು purandara vittala SATIGE SWAATANTRAVA KODADIRU. Show all posts

Monday 6 December 2021

ಸತಿಗೆ ಸ್ವಾತಂತ್ರ್ಯವ ಕೊಡದಿರು purandara vittala SATIGE SWAATANTRAVA KODADIRU


ಪುರಂದರದಾಸರು
ರಾಗ ಮೋಹನ ಛಾಪು ತಾಳ

ಸತಿಗೆ ಸ್ವತಂತ್ರವ ಕೊಡದಿರು, ನಿನ್ನ
ಮತಿಕೆಟ್ಟು ಬಾಯ ಬಿಡದಿರಣ್ಣ

ಪತಿಗೆ ಬಣ್ಣದ ಮಾತನಾಡ್ಯಾಳೊ , ಅವಳು
ಮಿತಿಯಿಲ್ಲದೆ ವೆಚ್ಚ ಮಾಡ್ಯಾಳೊ
ಅತಿ ಹರುಷದಿಂದ ಕೂಡ್ಯಾಳೊ , ಪರ
ಗತಿಗೆ ಕರಕರೆ ಮಾಡ್ಯಾಳಣ್ಣ

ಹಡೆದ ತಂದೆ ತಾಯ ತೊರೆಸ್ಯಾಳೊ, ತನ್ನ
ಕಡೆಗೆ ಬಾಯೆಂದು ಕರೆಸ್ಯಾಳೊ
ಬಿಡದೆ ಒಂಟಿಯ ಮಾಡಿ ನಿಲಸ್ಯಾಳೊ, ಒಂದು
ಪಡಿ ಭತ್ತಕೆ ಬಾಯ ಬಿಡಿಸ್ಯಾಳಣ್ಣ

ತಂದದ್ದರೊಳಗರ್ಧ ಕದ್ದಾಳೊ, ತನ್ನ
ಸಂದು ಸುಳಿವು ನೋಡಿ ಮೆದ್ದಾಳೊ
ಮುಂದಿದ್ದ ಕೂಸನ್ನು ಒದ್ದಾಳೊ, ಹತ್ತು
ಮಂದಿಲಿ ಮಾನವ ಕೆಡಿಸ್ಯಾಳಣ್ಣ

ಉಂಡು ಉಟ್ಟ ಮನೆ ಎಣಿಸ್ಯಾಳೊ, ಅವನ
ಭಂಡು ಮಾಡಿ ಬಾಯ ಬಿಡಿಸ್ಯಾಳೊ
ಮಂಡೆ ಕೆದರಿ ಕೊಂಡು ಸೆಣೆಸ್ಯಾಳೊ , ದೊಡ್ಡ
ಕೊಂಡ ಕೋತಿಯಂತೆ ಕುಣಿಸ್ಯಾಳಣ್ಣ

ಕರಕರೆ ಸಂಸಾರ ತರವಲ್ಲ, ಇಂಥ
ದುರುಳ ಹೆಣ್ಣಿನ ಸಂಗವಿರೆ ಸಲ್ಲ
ನೆರೆಹೊರೆ ನೋಡಿ ನಗುವರಲ್ಲ, ಸಿರಿ
ಪುರಂದರ ವಿಟ್ಠಲ ತಾ ಬಲ್ಲ
***


pallavi

satige svatantrava koDadiru ninna matikeTTu bAya biDadiraNNa

caraNam 1

patige baNNada mAtanADyALo avaLu mitiyillade vecca mADyALo
ati haruSadinda kUDyALo para gatige karakare mADyALaNNa

caraNam 2

haDeda tande tAya toresyALo tanna kaDege bAyendu karesyALo
biDade oNDiya mADi nilasyALo ondu paDi bhattake bAya biDisyALaNNa

caraNam 3

tandaddaroLagarda kaddALo tanna sandu sULivu nODi meddALo
mundidda kUsannu oddALo hattu mandili mAnava keDisyALaNNa

caraNam 4

uNDu uTTa mane eNisyALo avana bhaNDu mADi bAya biDisyALo
maNDe kedari koNDu seNesyALo doDDa koNDa kOdiyante kuNisyALaNNa

caraNam 5

karakre samsAra taravalla intha duruLa heNNina sangavire salla
nere hore nODi naguvaralla siri purandara viTtala tA balla
***

ಸತಿಗೆ ಸ್ವಾತಂತ್ರ್ಯವ ಕೊಡದಿರಿ - 
ನೀವುಮತಿಗೆಟ್ಟು ಭ್ರಮೆಯ ಬಡದಿರಿ ಪ.

ಪತಿಗೆ ಬಣ್ಣನೆ ಮಾತನಾಡ್ಯಾಳು - ತಾನುಮತಿಯಿಲ್ಲದೆ ಮೆಚ್ಚನಾಡಳುಅತಿ ಹರುಷದಲಿ ಬಂದು ಕೂಡ್ಯಾಳು ಕೂಡಿಖತಿಕರಕರೆಯನು ಮಾಡ್ಯಾಳು1

ತಂದೆ - ತಾಯ್ಗಳನೆಲ್ಲ ತೋರಿಸ್ಯಾಳು - ನೀಒಂದೆಡೆ ಬಾಯಿಂದು ಬರಿಸ್ಯಾಳುನಿಂದಿಸಿ ಬೆಯ್ಯುತ್ತ ಬೆರೆಸ್ಯಾಳು ನಿನ್ನನೊಂದಪಡಿಭತ್ತಕೆ ಬಾಯ ತೆರೆಸ್ಯಾಳು2

ತಂದಿದ್ದರೊಳಗರ್ಧ ಕದ್ದಾಳು ಕದ್ದುತಂದು ಸುಳ್ಳಹೇಳಿ ಮೆದ್ದಾಳುಮುಂದಿದ್ದ ಕೂಸಿನ ಹೊದ್ದಳು - ಹತ್ತುಮಂದಿ ಮುಂದೆ ಅಡ್ಡಬಿದ್ದಾಳು 3

ಉಂಡ ಊಟವನೆಲ್ಲ ನೆನೆಸ್ಯಾಳು - ತನ್ನಮಂಡೆ ಕೆದರಿಕೊಂಡು ಸೆಣಿಸ್ಯಾಳುಭಾಂಡು ಮಾಡಿ ಬಾಯಿ ತೆರಿಸ್ಯಾಳು - ನಿನ್ನಕೊಂಡಕೋತಿಯಂತೆ ಕುಣಿಸ್ಯಾಳು4

ಕರೆತರೆ ಸಂಸಾರ ಸ್ಥಿರವಲ್ಲ - ಈದುರುಳ ಹೆಣ್ಣಿನ ಸಂಗ ಸುಖವಿಲ್ಲನೆರೆದೊರೆಯವರು ನಗುವರೆಲ್ಲ - ನಮ್ಮಪುರಂದರವಿಠಲನು ತಾ ಬಲ್ಲ 5
*****