..
by ಗುರುಪ್ರಾಣೇಶ ವಿಠಲ
pranesha dasa stutih
ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆ |ನಂದ ಕೊಡು ಈ ಭಕ್ತಗೆ ||ಪೊಂದಿಕೊಂಡಿಹ ನಿನ್ನನೆಂದು ನಾ ಪ್ರಾರ್ಥಿಸುವೆ ಮಂದರೋದ್ಧರ ಮುಕುಂದಾ | ನಂದಾ ಪ
ಅನವರತ ನಿನ್ನ ಧೇನಿಸುವಂತೆ ಮನವು ಬಹು ಅನುಕೂಲವಾಗಿರಲಿ |ಅನಘ ನಿನ್ನಂಘ್ರಿಗಳ ಪೂಜಿಸುವದಕೆ ಕರಗಳನುಕೂಲವಾಗಿರಲಿ ||ಅನಿಮಿಷಾರಾಧ್ಯ ನಿನ್ನ ಕೀರ್ತಿ ಪದಕೆ ಜಿಂಹೆ ಅನುಕೂಲವಾಗಿರಲಿ |ದನುಜಕುಲ ವೈರಿ ನಿನ್ನವರಡಿಗೆ ನಡಿಯೆ ಪದವನುಕೂಲವಾಗಿರಲೀ ಬರಲಿ1
ಇವನ ಕವನಾ ಕೇಳಿ ಹರುಷಯುತರಾಗಿ ಸತ್ಕವಿಗಳೂ ತಲಿದೂಗಲಿ |ಪವನ ಮತದಲಿ ಪೇಳಿದಂತೆ ಅದನನುಸರಿಸಿ ಕವಿತೆಯು ಬಂದೊದಗಲಿ ||ನವರಾಗಗಳಿಂದೊಪ್ಪಿ ಲಘು ದೀರ್ಘ ಮೊದಲು ಮರ್ಮವ ತಿಳಿದು ಪೇಳುತಿರಲಿ |ಭುವನದೊಳಗುಳ್ಳ ಸುಜ್ಜನರು ಶೋಧಿಸಿ ಆಶುಕವಿಯೆಂದು ಕರೆಯುತಿರಲಿ | ಮೆರೆಯಲಿ ||
ಚಿರಕಾಲ ಬಾಳಿ ಬಹು ಕೀರ್ತಿಯುತನಾಗಿ ಈ ಧರಿಯೊಳಗೆ ಸುಖಿಸುತಿರಲಿಪರಮ ಭಕುತಿಯು ಪೆಚ್ಚಿ ಸೋತ್ತುಮರ ಪದಗಳಿಗೆ ಎರಗಿ ಕರುಣವ ಪಡೆಯಲಿ ||ಮರೆಯದಲೆ ಇಹಪರದಿ ಸುಖಗಳನು ಕೊಟ್ಟು ಶ್ರೀ ಹರಿಯೆ ಪೊರೆಯಂದಾಡಲಿ |ಮರುತಾಂತರ್ಯಾಮಿ ಗುರು ಪ್ರಾಣೇಶ ವಿಠಲನೆ ಶರಣ ಜನ ಕಾಮಧೇನೂ ನೀನು 3
***