Thursday 5 August 2021

ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆನಂದ ankita gurupranesha vittala pranesha dasa stutih

..

by ಗುರುಪ್ರಾಣೇಶ ವಿಠಲ

pranesha dasa stutih 

ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆ |ನಂದ ಕೊಡು ಈ ಭಕ್ತಗೆ ||ಪೊಂದಿಕೊಂಡಿಹ ನಿನ್ನನೆಂದು ನಾ ಪ್ರಾರ್ಥಿಸುವೆ ಮಂದರೋದ್ಧರ ಮುಕುಂದಾ | ನಂದಾ ಪ

ಅನವರತ ನಿನ್ನ ಧೇನಿಸುವಂತೆ ಮನವು ಬಹು ಅನುಕೂಲವಾಗಿರಲಿ |ಅನಘ ನಿನ್ನಂಘ್ರಿಗಳ ಪೂಜಿಸುವದಕೆ ಕರಗಳನುಕೂಲವಾಗಿರಲಿ ||ಅನಿಮಿಷಾರಾಧ್ಯ ನಿನ್ನ ಕೀರ್ತಿ ಪದಕೆ ಜಿಂಹೆ ಅನುಕೂಲವಾಗಿರಲಿ |ದನುಜಕುಲ ವೈರಿ ನಿನ್ನವರಡಿಗೆ ನಡಿಯೆ ಪದವನುಕೂಲವಾಗಿರಲೀ ಬರಲಿ1

ಇವನ ಕವನಾ ಕೇಳಿ ಹರುಷಯುತರಾಗಿ ಸತ್ಕವಿಗಳೂ ತಲಿದೂಗಲಿ |ಪವನ ಮತದಲಿ ಪೇಳಿದಂತೆ ಅದನನುಸರಿಸಿ ಕವಿತೆಯು ಬಂದೊದಗಲಿ ||ನವರಾಗಗಳಿಂದೊಪ್ಪಿ ಲಘು ದೀರ್ಘ ಮೊದಲು ಮರ್ಮವ ತಿಳಿದು ಪೇಳುತಿರಲಿ |ಭುವನದೊಳಗುಳ್ಳ ಸುಜ್ಜನರು ಶೋಧಿಸಿ ಆಶುಕವಿಯೆಂದು ಕರೆಯುತಿರಲಿ | ಮೆರೆಯಲಿ ||

ಚಿರಕಾಲ ಬಾಳಿ ಬಹು ಕೀರ್ತಿಯುತನಾಗಿ ಈ ಧರಿಯೊಳಗೆ ಸುಖಿಸುತಿರಲಿಪರಮ ಭಕುತಿಯು ಪೆಚ್ಚಿ ಸೋತ್ತುಮರ ಪದಗಳಿಗೆ ಎರಗಿ ಕರುಣವ ಪಡೆಯಲಿ ||ಮರೆಯದಲೆ ಇಹಪರದಿ ಸುಖಗಳನು ಕೊಟ್ಟು ಶ್ರೀ ಹರಿಯೆ ಪೊರೆಯಂದಾಡಲಿ |ಮರುತಾಂತರ್ಯಾಮಿ ಗುರು ಪ್ರಾಣೇಶ ವಿಠಲನೆ ಶರಣ ಜನ ಕಾಮಧೇನೂ ನೀನು 3

***

 

No comments:

Post a Comment