..
kruti by ಭೀಮಾಶಂಕರರು ದಾಸರು bheemashankara
ಭೀಮಾ ಭವಭಯಕತಿದೂರಾ ಭೀಮಾಶಂಕರನವತಾರಾ |ಭೀಮಾತೀರದಲಿಹ ವಾಯುಕುಮಾರಾ ಸಮರಂಗಣಧೀರಾ 1
ಮಾಯಾಮಯ ಮುಸುಕಿದ ಬೆಟ್ಟಾ | ಮಾಯಾ ವಜ್ರಾಂಗವ ತೊಟ್ಟಾ | ಮಾಯಾ ಪಾಶದ ಸಂಗಮವನು ಬಿಟ್ಟಾ |ಲಂಕಾಪುರಿ ಸುಟ್ಟಾ 2
ಶರಣಾಗತ ಭಕ್ತರ ಕಾವಾ | ಶರಣ ಜನರಂತರ್ಭಾವಾ | ಶರಣಾ ಬ್ರಹ್ಮಾದಿಗಳಿಗೆ ಮಹದೇವಾ ಸಂಜೀವನ ತಾವಾ 3
ಕರ್ತಾ ನೆಲವಿಗಿ ಪುರದೊಳಗೆ | ಕರ್ತಾ ರಾಮರ ಸ್ಥಳದೊಳಗೆ | ಕರ್ತಾನುಷ್ಠಾನಿಕ ಸೇವಕರಿಗೆ | ಭಾವನ ಇದ್ಧಾಂಗೆ 4
ರಾಮಾ ಲಕ್ಷ್ಮಣನ ಬಂಧೂ | ರಾಮನ ಸೇವಕನೆಂದೂ |ರಾಮಾಶಂಕರ ಭೇದಿಲ್ಲೆಂದೂ | ತಿಳಿದವ ಸುಖಸಿಂಧೂ 5
***