Showing posts with label ಸಾರಿದೆನೋ ನಿನ್ನಾ ಶ್ರೀ ರಾಘವೇಂದ್ರರನ್ನಾ ಎಂದೆಂದಿಗೂ ankita raghavendra. Show all posts
Showing posts with label ಸಾರಿದೆನೋ ನಿನ್ನಾ ಶ್ರೀ ರಾಘವೇಂದ್ರರನ್ನಾ ಎಂದೆಂದಿಗೂ ankita raghavendra. Show all posts

Thursday, 5 August 2021

ಸಾರಿದೆನೋ ನಿನ್ನಾ ಶ್ರೀ ರಾಘವೇಂದ್ರರನ್ನಾ ಎಂದೆಂದಿಗೂ ankita raghavendra

 ..

kruti by radhabai

ಸಾರಿದೆನೋ ನಿನ್ನಾ ಶ್ರೀ ರಾಘವೇಂದ್ರರನ್ನಾ ಎಂದೆಂದಿಗೂ

ನಿಮ್ಮ ಚರಣ ಬಿಡೆ ಪ್ರಭುವೇ ಪ


ಗಾನವಿಲೋಲನೇ ದೀನ ಜನ ಪಾಲಕನೇ

ಜ್ಞಾನಿಗಳರಸನೇ ಶ್ರೀ ರಾಘವೇಂದ್ರಾ

ಭಕ್ತಿಯಿಂದಲಿ ನಿಮ್ಮ ಆರಾಧಿಪರ ಆಪತ್ತು

ಕಳೆಯುವೆ ಶ್ರೀ ರಾಘವೇಂದ್ರಾ 1

ನಿಮ್ಮನ್ನು ಸ್ತುತಿಪೆನಾ ನಿಮ್ಮ ಪದಸೇವಿಪೆನಾ

ನಿಮ್ಮ ನಾಮ ವುಚ್ಚರಿದೇ ಶ್ರೀ ರಾಘವೇಂದ್ರಾ

ಜಪತಪ ಮಾಡಿಲ್ಲಾ ವ್ರತನೇಮ ತಿಳಿದಿಲ್ಲಾ

ವ್ಯರ್ಥವಾಯಿತು ಕಾಲ ಶ್ರೀ ರಾಘವೇಂದ್ರಾ 2

ಎನ್ನಪರಾಧವ ಮನ್ನಿಸಬೇಕಿನ್ನು

ಘನ್ನ ಗುಣಮಣಿ ಶ್ರೀ ರಾಘವೇಂದ್ರಾ |

ಬಗೆಬಗೆಯಿಂದಲಿ ಸ್ತುತಿಸಿ ಬೇಡುವೆ ಪ್ತಭುವೆ

ತಡ ಮಾಡದಲೆ ಕಾಯೊ ಶ್ರೀ ರಾಘವೇಂದ್ರಾ 3

***