Showing posts with label ಬಂದಾ ಮನ್ಮಾನಸಕೆ ಶ್ರೀಹರಿ vyasa vittala BANDAA MANMAANASAKE SRIHARI. Show all posts
Showing posts with label ಬಂದಾ ಮನ್ಮಾನಸಕೆ ಶ್ರೀಹರಿ vyasa vittala BANDAA MANMAANASAKE SRIHARI. Show all posts

Friday, 27 December 2019

ಬಂದಾ ಮನ್ಮಾನಸಕೆ ಶ್ರೀಹರಿ ankita vyasa vittala BANDAA MANMAANASAKE SRIHARI

 ರಾಗ ಅಭೇರಿ   ಆದಿತಾಳ 

Audio by Mrs. Nandini Sripad

On Vishnu
ಶ್ರೀ ವ್ಯಾಸವಿಠ್ಠಲ ದಾಸರ ಕೃತಿ 
( ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರು )


ಬಂದಾ ಮನ್ಮಾನಸಕೆ ಶ್ರೀಹರಿ ॥ ಪ ॥
ಇಂದಿರೆರಮಣ ಮುಕುಂದ ಆನಂದದಿ ॥ ಅ ಪ ॥

ಥಳಿಥಳಿಸುವ ನವರತ್ನ ಕಿರೀಟವು ।
ಪೊಳೆವ ಮಕರಕುಂಡಲ ಧ್ವಜವು ॥
ತುಲಸಿಮಾಲೆ ವನಮಾಲೆಗಳಿಂದೊಪ್ಪುತ ।
ಬಲು ತೇಜಸ್ಸಿಗೆ ತೇಜೋಮಯನಾದ ಹರಿ ॥ 1 ॥

ಲಲನೆ ರುಕ್ಮಿಣಿ ಸತ್ಯಭಾಮೆಯರಿಂದೊಡಗೂಡಿ ।
ನಲಿದಾಡುತ ಎನ್ನ ಹೃದಯದಲಿ ॥
ಬಲುಬಲು ವಿಗಡ ಅಜ್ಞಾನಾಂಧಕಾರದ ।
ಕುಲವನೋಡಿಸಿ ಮತ್ಕುಲ ದೈವಮೂರುತಿ ॥ 2 ॥

ಎಷ್ಟು ಜನುಮದ ಪುಣ್ಯ ಬಂದೊದಗಿತೋ ।
ಎಷ್ಟು ಧನ್ಯರೋ ನಮ್ಮ ಹಿರಿಯರು ॥
ಎಷ್ಟು ದೇವತೆಗಳು ನಮಗೆ ಹರಸಿದರೋ ।
ದೃಷ್ಟಿಗೋಚರ ನಮ್ಮ ವ್ಯಾಸವಿಠ್ಠಲ ಬಲ್ಲ ॥ 3 ॥
***


banda manmanasake sri hari banda manmanasake
indireramana mukunda anandadi ll

thalathalisuva navaratna kiritavu
holevamakara kundaladhvajavu l
tulasimale vanamaleyindopputa
balu tejasvige tejomayanada hari ll

lalane rukmini satyabhamarindodagudi
nalidaduta yenna hrudayadali l
balubalu vigadha agyanandhakarada
kulavanodisi matkala daiva muruti ll

estu janumada punya bandodagito
estu dhanyaro namma hiriyaru l
estu devategalu namage harasidaro
drushtigochara namma vyasa vittala balla ll
***