( ಶ್ರೀಕೃಷ್ಣ ಚಾರಿತ್ರ , ಗೋಪಿಕಾ ವಿರಹ )
ರಾಗ ಕಾಪಿ
ಧ್ರುವತಾಳ
ಈ ವನದೆಡೆಗಳು ಈ ನದಿ ಪುಲಿನಗಳೀ -
ಶಶಿ ಶಿಲೆಗಳು ಈ ಸುರತರುವಿನ ನೆಳಿಲು
ಈ ತರುಲತೆಗಳು ಈ ಶುಕಪಿಕ ರವ
ಯಾಕೆ ಮಾಧವನ ಮರಿಯಲೀಯವೆ ಕೆಳದಿ
ಆ ಮುಗುಳುನಗೆಯ ಆ ಸೊಬಗಾ
ಆ ಸುರತರು ನೆಳಲಲ್ಲಿ ರತಿಯು
ಈ ಸುರತವ ನರುಹಿದಾ (ಆ)ಬಾಲಿಯರಿಗೆ
ಈ ಸುಗುಣಮಯ ರಂಗವಿಠ್ಠಲನೆ ಕೆಳದಿ ॥ 1 ॥
ಮಠ್ಯತಾಳ
ಇನ್ನು ರಂಗನ ಸಂಗವ
ಇನ್ನೆತ್ತಣದು ಗೋಪಿಯರಿಗೆ
ಮಧುರಾಪುರಿಯ ಮಾನಿನಿಯರ
ಬಲಿಗೆ ಕೃಷ್ಣನೆ ಸಿಲಿಕಿದನಾಗಿ
ರತಿ ವಿದಗ್ಧರಾದ ವಧುಗಳು
ರಸಿಕ ನಮ್ಮ ರಂಗವಿಠ್ಠಲಾ ॥ 2 ॥
ರೂಪಕತಾಳ
ಬಿಡುವಾರು ಅಧಮರರಾ ಗಣಿಕಾ ಸ್ತ್ರೀಯರು ನೆರೆ
ಬಿಡುವವು ವೀತ ಫಲ ತರುಲತೆ ದ್ವಿಜಗಣ
ಬಿಡುವವು ಮೃಗದಾ ದಳ್ಳುರಿಯ ಕಂಡಡವಿಯ
ಬಿಡುವಾನೆ ಜಾರ ಪರಸತಿಯರ ನೆರೆದಿನ್ನು
ಈ ಪರಿ ಕಂಡೆವು ನಮ್ಮ ವಲ್ಲಭನಲ್ಲಿ
ಅಕ್ಕಟ ರಂಗವಿಠ್ಠಲ ಕರುಣಿಯೆ ॥ 3 ॥
ಝಂಪೆತಾಳ
ಹೆತ್ತ ತಾಯಿತಂದೆಯರಾ ನೋಡಲೆಂದು
ಇತ್ತಲಟ್ಟಿದನೆ ಉದ್ಧವ ನಿನ್ನ ಗೋವಳಾ
ಮತ್ತಾರು ಉಂಟು ವ್ರಜದೊಳು ತನಗೆ ನೆನವರು
ಹತ್ತಿರಿಕೆ ತನ್ನೀವರಲ್ಲಿ ತಾ ಬಿಡುವನೆ
ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ
ಮತ್ತಾಳಿಗೆ ಕುಸುಮದಾನೆಹಾದಂತೆ
ರಕ್ತೀ ಎಮ್ಮೊಳಗುಂಟು ರಂಗವಿಠ್ಠಲಗೆ ॥ 4 ॥
ತ್ರಿಪುಟತಾಳ
ಇನ್ಯಾತಕೆ ರಂಗ ಇಲ್ಲಿಗೆ ಬಾಹಾ
ಮಧುಪುರಿಯರ ಅರಸನಾದಾ
ಮಲ್ಲರ ಕೊಂದು ಮಾವನ್ನ ಮರ್ದಿಸಿ
ಮಧುರಾಪುರಿಗೆ ರಂಗ ಅರಸನಾದಾ
ಅವನ ನೆನಹೆ ಸಾಕು ರಂಗವಿಠ್ಠಲನಾ ॥ 5 ॥
ಧ್ರುವತಾಳ
ಕುಂದು ಕುಸುಮ ಶಶಾಂಕ ರಂಜಿತ
ವೃಂದಾವನದಲ್ಲಿಹಾ
ಮಂದಮಾರುತ ಬರಲು ನಲುವನರ -
ವಿಂದನಯನ ಹಾ
ಕಂದಿದೆವು ಕುಂದಿದೆವು ನಾವು
ಕಂದರ್ಪನ ಶರದಟ್ಟೂಳಿಗೆ
ಇಂದುಮುಖಿಯರ ವೃಂದದೊಡನೆ ಕೃಷ್ಣ
ಅಂದು ನಮ್ಮೊಡನಾಡಿದ ಪರಿಯನು ತಾನು
ಇಂದೊಮ್ಮೆಯಾದರು ನೆನೆವನೆ ಹಾ ॥ 6 ॥
ರೂಪಕತಾಳ
ಪೊಂದೇರು ಎಲ್ಲಿಂದ ಬಂದಿದೆ ವ್ರಜದಲ್ಲಿ
ಅಂದನಕ್ರೂರ ತಾ ಮರಳಿ
ಬಂದನು ನಮ್ಮ ಕರದೊಯ್ಯಬೇಕೆನುತ
ಕೊಂದುಕೊಳ್ಳಲಿ ತಮ್ಮ ಹಿರಿಯರನು ಹರಲಿಗೆ
ಅಂದೆಮ್ಮನಗಲಿಸಿದ ರಂಗವಿಠ್ಠಲನಾ
ಅಂದೆಮ್ಮ ಕೊಂದಾ ಇಂದ್ಯಾಕೆ ಕೊಲ್ಲಲಿ ಬಂದಾ ॥ 7 ॥
ಅಟ್ಟತಾಳ
ಪರಮ ಸುಖದಾಸೆಯು ಬೇರೆಯಿಲ್ಲವೆಂದು
ವರದಳು ಪಿಂಗಳೆ ಜನರಿಗೆ ಹಿತವನು
ಪರಮ ಸುಖದಾಸೆ ಈತನ ಸೇವೆ ಎಲ್ಲವೆ
ಅರಿದರಿದು ಬಿಡುವ ನಾವು ನರಪಶುಗಳಲ್ಲವೆ
ಸಿರಿರಮಣಿ ಬಿಡಲು ನಮ್ಮ ರಂಗವಿಠ್ಠಲನಾ ॥ 8 ॥
ಏಕತಾಳ
ಎಮ್ಮ ತನುಮನ ತನ್ನಾಧೀನವೆಲೆ
ಅನ್ಯವನರಿಯನು ತನ್ನೊಲಿದಂತೆ ಮಾಡಲಿ
ಉನ್ನಂತ ಗುಣನಿಧಿಯೆಂದು ಮೊರೆಹೊಕ್ಕೆನು
ಅನ್ಯವನರಿಯನು ತನ್ನೊಲಿದಂತೆ ಮಾಡಲಿ
ಚೆನ್ನ ರಂಗವಿಠ್ಠಲಗೆ ಸಲ್ಲೆ
ಮಾರುಹೋದೆನು ಅನ್ಯವನರಿಯೆ ॥ 9 ॥
ಜತೆ
ಅವನ ಹಂಬಲವೆನಗೆ ಜೀವನವವ್ವಾ
ಭುವನಮೋಹನ ರಂಗವಿಠ್ಠಲ ದೇವರದೇವ ॥
**********
sripadaraja kruti suladi
ಭೈರವಿ ರಾಗ
( ಧ್ರುವತಾಳ)
ಈ ವನದೆಡೆಗಳು ಈ ಲತೆವನಗಳು
ಈನದಿಪುಳಿನಗಳೀ ಶಶಿಶಿಲೆಗಳು
ಸುರತರು ನೆಳಲು ಶುಕಪಿಕರವ
ಯಾಕೆ ಮಾಧವನ ಮರೆಯಲೀಯದಿವೆ ಕೆಳದಿ
ಆ ಮುಗುಳುನಗೆಯ ಆ ಸೊಬಗ
ಈಸುರತರು ನೆಳಲೀ ರತಿಯ
ಈ ಸುರತವನರಿದ ಬಾಲೆಯರೆಂತೊ
ಈ ಸುಗುಣಮಯ ರಂಗವಿಠಲನೆ ಕೆಳದಿ ೧
(ಮಠ್ಠ್ಯ ತಾಳ)
ಇನ್ನು ರಂಗನಂಗಸಂಗವು ಎತ್ತಣದು ಗೋಪಿಯರಿಗೆ
ಮಧುರೆಯ ಮಾನಿನಿಯರ ಬಲೆಯಲ್ಲಿ ಸಿಲುಕಿದನ
ಮಧುರೆಯ ಮಾನಿನಿಯರು ರತಿವಿದಗ್ಧರಾ
ವಧುಗಳು ರಸಿಕ ನಮ್ಮ ರಂಗವಿಠಲ ೨
(ತ್ರಿಪುಟ ತಾಳ)
ಇನ್ಯಾತಕೆ ರಂಗ ಇಲ್ಲಿಗೆ ಬಾಹಾ
ಮಧುರಾಪುರಿಯರಸನಾದ
ಮಲ್ಲರ ಕೊಂದು ಮಾವನ್ನ ಮಡುಹಿದ
ಮಧುರಾಪುರಿಯರಸನಾದ
ಅವನ ನೆನಹೆ ಸಾಕು ರಂಗವಿಠಲನಾ ೩
(ರೂಪಕತಾಳ)
ಬಿಡುವರು ಅಧನರ ಗಣಿಕೆಯರು ನೆರೆ
ಬಿಡುವವು ವಿಫಲ ತರುವ ದ್ವಿಜಗಣ
ಬಿಡುವವು ಮೃಗ ದಳ್ಳುರಿಗೊಂಡಡವಿಯ
ಬಿಡುವನು ಜಾರ ಪರವಧುವನು ನೆರೆದಿನ್ನು
ಇವು ದಿಟವಾಯಿತು ನಮ್ಮ ವಲ್ಲಭನೊಳು
ಅಕಟಕಟಾ ರಂಗವಿಠಲನ ಕರುಣಿಯೆ ೪
(ಅಟ್ಟತಾಳ)
ಕುಂದಕುಸುಮ ಶಶಾಂಕ ರಂಜಿತ
ವೃಂದಾವನದಲ್ಲಿ ಮಂದಮಾರುತ ಬರಲು ನಲಿದನು ಅರ-
ವಿಂದನಯನನು ಹಾ ಹಾ
ಕಂದಿದೆವು ಕುಂದಿದೆವು ನಾವು
ಕಂದರ್ಪನ ಶರದಟ್ಟುಳಿಗೆ ಹಾ
ಇಂದುಮುಖಿಯರ ವೃಂದದೊಳಗೆ ಕೃಷ್ಣಾ
ಅಂದು ನಮ್ಮೊಡನಾಡಿದ ಪರಿಯನು ತಾನು
ಇಂದೊಮ್ಮೆಯಾದರು ನೆನೆವನೆ ಹಾ ಹಾ
ಎಂದಿಗಾದರು ರಂಗವಿಠಲನಿಲ್ಲಿಗೆ ಬಹನೆ ೫
(ಝಂಪೆತಾಳ)
ಪೊಂದೇರದೆಲ್ಲಿಯದವ್ವಾ ಬಂದಿದೆ ವ್ರಜದೊಳಗೆ
ಅದಿನಕ್ರೂರನೆಂಬ ಕ್ರೂರನು ಮರಳಿ ಬಂದನೊ
ನಮ್ಮ ಕರೆದೊಯ್ಯಲಿಬೇಕೆಂದು
ಅಂದೆಮ್ಮ ಕೊಂದ
ಇಂದ್ಯಾರ ಕೊಲ್ಲಲಿ ಬಂದ
ಕೊಂದು ಕೊಳ್ಳಲಿ ತಮ್ಮ ಹಿರಿಯರನು ಹರಲಿಗ
ಅಂದೆಮ್ಮನಗಲಿಸಿದ ರಂಗವಿಠಲನಾ ೬
(ಏಕತಾಳ)
ಹೆತ್ತ ತಾಯಿ ತಂದೆಯರ ನೋಡಲೆಂದು
ಇತ್ತಲಟ್ಟಿದನೆ ಉದ್ಧವ ನಿನ್ನ ಗೋವಳಾ
ಮತ್ಯಾರುಂಟು ವ್ರಜದಲ್ಲಿ ನೆನೆವರು
ಹತ್ತಿರಕೆ ತನ್ನವರಲ್ಲಿ ತಾ ಬಿಡುವನೆ
ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ
ಮತ್ತಳಿಗೆ ಕುಸುಮದ ನೇಹದಂತೆ
ರಕ್ತಿ ಎಮ್ಮೊಳುಂಟು ರಂಗವಿಠಲಗೆ ೭
(ಝಂಪೆತಾಳ)
ಪರಮಸುಖದಾಸೆ ಈತನ ಸೇವೆ ಅಲ್ಲವೆ
ಒರೆದಳೆ ಪಿಂಗಳೆ ಜನರಿಗೆ ಹಿತವನು
ಅರಿದರಿದು ಬಿಡುವ ನಾವು ನರಪಶುಗಳಲ್ಲವೆ
ಸಿರಿರಮಣಿ ಬಿಡಳು ನಮ್ಮ ರಂಗವಿಠಲನ್ನ ೮
(ಏಕತಾಳ)
ಎಮ್ಮ ತನು ಮನ ತನ್ನಧೀನವಲ್ಲೆ
ಅನ್ಯವರಿಯೆವು ತನ್ನರಿದಂತೆ ಮಾಡಲಿ
ಎಮ್ಮಸುವು ತನ್ನಧೀನವಲ್ಲೆ
ಅನ್ಯವರಿಯೆವು ತನ್ನರಿದಂತೆ ಮಾಡಲಿ
ನಮ್ಮ ರಂಗವಿಠಲರೇಯಗೆ
ಇನ್ನು ಸಲೆ ಮಾರುಹೋದೆವೆ ಕೆಳದಿ ೯
(ಜತೆ)
ಅವನ ಹಂಬಲವೆಮಗೆ ಜೀವನವವ್ವಾ
ಭುವನಮೋಹನ ರಂಗವಿಠಲನು ಕರುಣಿಯೆ
****
ಶ್ರೀ ಶ್ರೀಪಾದರಾಜರು 03 ಸುಳಾದಿಗಳನ್ನು ರಚಿಸಿದ್ದಾರೆ.
" ತಾಳ : ಧ್ರುವ "
ಈ ವನದೆಡೆಗಳು ಈ ನದಿ ಪುಳಿನಗಳೀ । ಶಶಿ ಶಿಲೆಗಳು ಈ ಸುರ ತರುವಿನ ನೆಳಿಲು । ಈ ತರುಲತೆಗಳು ಈ ಶುಕ ಪಿಕ ರವ । ಯಾಕೆ ಮಾಧವನ ಮರಿಯಲೀಯವೇ ಕೆಳದಿ । ಆ ಮುಗುಳು ನಗೆಯು ಆ ಸೊಬಗಾ । ಆ ಸುರತರು ನೆಳಲಲ್ಲಿ ರತಿಯು । ಆ ಸುರತರುವನರುಹಿದಾ ( ಆ ) ಬಲಿಯರಿಗೆ । ಈ ಸುಗುಣಮಯ ರಂಗ ವಿಠ್ಠಲನೆ ಕೆಳದಿ ।। 1।।
ತಾಳ : ಮಠ್ಯ
ಇನ್ನು ರಂಗನ ಸಂಗವ ಇನ್ನೆತ್ತಣದು ಗೋಪಿಯರಿಗೆ । ಮಧುರಾ ಪುರಿಯ ಮಾನಿನಿಯರ ಬಲಿಗೆ ಕೃಷ್ಣನೆ ಸಿಲುಕಿದನಾಗಿ । ರತಿ ವಿದಗ್ಧರಾದ ವಧುಗಳು । ರಸಿಕ ನಮ್ಮ ರಂಗ ವಿಠ್ಠಲ ।। 2 ।।
ತಾಳ : ರೂಪಕ
ಬಿಡುವಾರು ಅಧಮರರಾ ಗಣಿಕಾ ಸ್ತ್ರೀಯರು ನೆರೆ । ಬಿಡುವವು ವೀತ ಫಲ ತರುಲತೆ ದ್ವಿಜಗಣ । ಬಿಡುವವು ಮೃಗದಾ ದಳ್ಳುರಿಯ ಕಂದಡವಿಯ । ಬಿಡುವಾನೆ ಜಾರ ಪರ ಸತಿಯರ ನೆರೆದಿನ್ನು ಈ ಪರಿ । ಕಂಡೆವು ನಮ್ಮ ವಲ್ಲಭನಲ್ಲಿ । ಅಕ್ಕಟ ರಂಗ ವಿಠ್ಠಲ ಕರುಣಿಯೇ ।। 3 ।।
ತಾಳ : ಝ೦ಪೆ
ಹೆತ್ತ ತಾಯಿ ತಂದೆಯರಾ ನೋಡಲೆಂದು । ಇತ್ತಲಟ್ಟಿದನೇ ಉದ್ಧವ ನಿನ್ನ ಗೋವಳಾ । ಮತ್ತಾರು ಉಂಟು ವ್ರಜದೊಳು ತನಗೆ ನೆನವರು । ಹತ್ತಿರಕೆ ತನ್ನೀವರಲ್ಲಿ ತಾ ಬಿಡುವನೇ । ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ । ಮತ್ತಾಳಿಗೆ ಕುಸುಮದಾನೆ ಹಾಡಂತೆ । ರಕ್ತೀ ಎಮ್ಮೊಳಗುಂಟು ರಂಗ ವಿಠ್ಠಲಗೆ ।। 4 ।।
ತಾಳ : ತ್ರಿವಿಡಿ
ಇನ್ಯಾತಕೆ ರಂಗ ಇಲ್ಲಿಗೆ ಬಾಹಾ । ಮಧುಪುರಿಯರ ಅರಸನಾದಾ । ಮಲ್ಲರಕೊಂದು ಮಾವನ್ನ ಮರ್ದಿಸಿ । ಮಧುರಾಪುರಿಗೆ ರಂಗ ಅರಸನಾದಾ । ಅವನ ನೆನಹೇ ಸಾಕು ರಂಗ ವಿಠ್ಠಲನಾ ।। 5 ।।
ತಾಳ : ಧ್ರುವ
ಕುಂದು ಕುಸುಮ ಶಶಾಂಕ ರಂಜಿತ । ವೃಂದಾವನದಲ್ಲಿಹಾ । ಮಂದ ಮಾರುತ ಬರಲು ನಲುವನರ । ವಿಂದ ನಯನ ಹಾ । ಕಂದಿದೆವು ಕಂದಿದೆವು ನಾವು । ಕಂದರ್ಪನ ಶರ ದಟ್ಟೂಳಿಗೆ । ಇಂದು ಮುಖಿಯರ ವೃಂದದೊಡನೆ ಕೃಷ್ಣ । ಅಂದು ನಮ್ಮೊಡನಾಡಿದ ಪರಿಯನು ತಾನು । ಇಂದೊಮ್ಮೆಯಾದರೂ ನೆನೆವೆನೆ ರಂಗ ವಿಠ್ಠಲನ ಹಾ ।। 6 ।।
ತಾಳ : ರೂಪಕ
ಪೊಂದೇರು ಯಲ್ಲಿಂದ ಬಂದಿದೆ ವ್ರಜದಲ್ಲಿ ।ಅಂಧನಕ್ರೂರ ತಾ ಮರಳಿ । ಬಂದನು ನಮ್ಮ ಕರೆದೊಯ್ಯಬೇಕೆನುತ । ಕೊಂದುಕೊಳ್ಳಲಿ ತಮ್ಮ ಹಿರಿಯರನ್ನು ಹರಲಿಗೆ । ಅಂದೆಮ್ಮನಗಲಿಸಿದ ರಂಗ ವಿಠ್ಠಲನಾ । ಅಂದೆಮ್ಮ ಕೊಂದಾ ಇಂದ್ಯಾಕೆ ಕೊಲ್ಲಲಿ ಬಂದಾ ।। 7 ।।
ತಾಳ : ಅಟ್ಟ
ಪರಮ ಸುಖದಾಸೆಯು ಬೇರೆಯಿಲ್ಲವೆಂದು । ವರದಳು ಪಿಂಗಳೆ ಜನರಿಗೆ ಹಿತವನು । ಪರಮ ಸುಖದಾಸೆ ಈತನ ಸೇವೆ ಯಲ್ಲವೇ । ಅರಿದರಿದು ಬಿಡುವ ನಾವು ನರಪಶುಗಳಲ್ಲವೇ । ಸಿರಿ ರಮಣಿ ಬಿಡಲು ನಮ್ಮ ರಂಗ ವಿಠ್ಠಲನಾ ।। 8 ।।
ತಾಳ : ಏಕ
ಯಮ್ಮ ತನುಮನ ತನ್ನಾಧೀನವೆಲೆ । ಅನ್ಯವನರಿಯನು ತನ್ನೊಲಿದಂತೆ ಮಾಡಲಿ । ಉನ್ನಂತ ಗುಣನಿಧಿಯಂದು ಮೊರೆಯೊಕ್ಕೆನು । ಅನ್ಯವನರಿಯನು ತನ್ನೊಲಿದಂತೆ ಮಾಡಲಿ । ಚೆನ್ನ ರಂಗ ವಿಠ್ಠಲಗೆ ಸಲ್ಲೆ ಮಾರುಹೋದೆನು ಅನ್ಯವನರಿಯೆ ।। 9 ।।
ಜತೆ :
ಅವನ ಹಂಬಲವೆನಗೆ ಜೀವನವವ್ವಾ ।
ಭುವನ ಮೋಹನ ರಂಗ ವಿಠ್ಠಲ ದೇವರದೇವ ।। 10 ।।