..
kruti by ಲಕ್ಷ್ಮೀನಾರಯಣರಾಯರು Lakshminarayanaru
ಆರತಿ ಬೆಳಗಿರೆ ಶಾರದೆಗೆ | ಗುಣ
ವಾರಿಧಿ ಕರುಣಾ ನೀರಧಿಗೆ ಪ
ವಾಣಿಗೆ ಬ್ರಹ್ಮನ ರಾಣಿಗೆ ನತ ಗೀ-
ರ್ವಾಣಿಗೆ ಪುಸ್ತಕ ವೀಣಾ ಪಾಣಿಗೆ
ಜಾಣೆಗೆ ತ್ರಿಭುವನ ತ್ರಾಣೆಗೆ ಜಪಸರ ಧಾ-
ರಿಣಿಗೆ ಶುಭ ರೂಪಿಣಿಗೆ 1
ಶಾರದ ಚಂದ್ರನ ಕಿರಣನ ಪೋಲುವ
ಚಾರು ಶುಕ್ಲಾಂಬರದಿಂದಲಿ ಪೊಳೆವ
ಹಾರ ಮಕುಟ ಪದ ನೂಪುರ ಕಂಕಣ
ಧಾರಿಣಿಗೆ ಅಘ ಹಾರಿಣಿಗೆ 2
ಸಕಲಾಗಮಗಳನಾಂತಿಹ ಗಣಿಗೆ
ನಿಖಿಲ ಕಲೆಗಳನು ಕಾದಿಹ ಫಣಿಗೆ
ಭಕುತರ ಪಾಲಿನ ಚಿಂತಾಮಣಿಗೆ
ಶ್ರೀಕಾಂತನಾತ್ಮಜನರಗಿಣಿಗೆ 3
***