RAO COLLECTIONS SONGS refer remember refresh render DEVARANAMA
ಗಣನಾಥ ಮಣಿವೆನೊ ಗಣನಾಥ ಪ
ಘನ ವಿಶ್ವಾರಾಧಕ ವಿಘ್ನ ವಿದಾರಕ ಅ.ಪ
ಲಂಬ ಉದರ ವಿಳಂಬ ತಡೆಯಲಾರೆ
ಶಂಭುಗೆ ಪೇಳು ಭವಾಂಬುಧಿಗಂಬಿಗ 1
ಸ್ಕಂದನನುಜ ಭವ ಬಂಧನ ಮೋಚಕ
ಚಂದ್ರವರ್ಣ ಗಾತ್ರ ಸುಂದರ ಗಜವಕ್ತ್ರ 2
ಪ್ರಾಣಾವಿಷ್ಟ ಪ್ರಭು ಪ್ರಾಣಾ ಜಯೇಶ
ವಿಠಲನರಿಸುವ ವಿಘ್ನ ನಿವಾರಿಸು 3
***