ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವೆಂದರವಗೆ ಪರಮಸುಖ ಭವಾರ್ಣವ ದುಃಖ ಪ
ಗುರು ಎಂದ್ಹಾಂಗ ಬಾಯಿಲಿ ಅರಿಯಬೇಕು ಮನದಲಿ ದೋರುವದಾನಂದ ಲೀಲಿ ಗುರು ಕೃಪೆಯಲಿ 1
ಅರ್ತರೊಂದೆ ಸಾಕು ಪೂರ್ಣ ಕರ್ತು ಸದ್ಗುರು ಚರಣ ಮತ್ರ್ಯದೊಳಿದೆ ನಿಧಾನ ಸಾರ್ಥಕಗುಣ 2
ನರನೆಂದು ಮರೆದೀಗ ಗುರು ನಿಜಾಗುವ ಬ್ಯಾಗ ಸೆರಗು ಮಹಿಪತಿಗೆ ದೋರಿತು ಈಗ 3
****