ನಾರಾಯಣನೆಂಬ ನಾಮವ ನಿಮ್ಮ
ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ||ಪ||
ಹೃದಯ ಹೊಲವ ಮಾಡಿ ಮನವ ನೇಗಿಲ ಮಾಡಿ
ಶ್ವಾಸೋಚ್ಛ್ವಾಸ ಎರಡೆತ್ತು ಮಾಡಿ
ಜ್ಞಾನವೆಂಬ ಹಗ್ಗ ಕಣ್ಣಿಯ ಮಾಡಿ
ನಿರ್ಮಮವೆಂಬ ಗುಂಟೆಲಿ ಹರವಿರಯ್ಯ ||
ಮದ ಮತ್ಸರಗಳೆಂಬ ಮರಗಳನೆ ತರಿದು
ಕಾಮ ಕ್ರೋಧಗಳೆಂಬ ಕಳೆಯ ಕಿತ್ತಿ
ಪಂಚೇಂದ್ರಿಯವೆಂಬ ಮಂಚಿಕೆಯನೆ ಹಾಕಿ
ಚಂಚಲವೆಂಬ ಹಕ್ಕಿಯ ಹೊಡೆಯಿರಯ್ಯ
ಉದಯಾಸ್ತಮಾನವೆಂಬ ಎರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿ ಅಳೆಯುತಿರೆ
ಸ್ವಾಮಿ ಶ್ರೀ ಪುರಂದರವಿಠಲನ ನೆನೆದರೆ
ಪಾಪರಾಶಿಯ ಪರಿಹರಿಸುವನಯ್ಯ ||
***
ರಾಗ ಬಿಲಹರಿ ಅಟತಾಳ (raga, taala may differ in audio)
pallavi
nArAyaNanemba nAmava nimma nAlige tudiyindali bittirayya
caraNam 1
hrdaya holava mADi manava nEgila mADi shvAsOcchavAsa eraDettu mADi
jnAnavemba hagga kaNNiya mADi nirmamavemba guNTeli haravirayya
caraNam 2
mada matsaragaLemba maragaLane taridu kAma krOdhagaLemb kaLeya kittu
pancEndriyavemba mancikeyane hAki cancalavemba hakkiya hoDeyirayya
caraNam 3
udayAstamAnavemba eraDu koLagadalli AyuSyavemba rAsi aLeyutire
svAmi shrI purandara viTTalana nenedare pApa rAsiya pariharisuvanayya
***
ನಾರಾಯಣನೆಂಬ ನಾಮದ ಬೀಜವ ನಿಮ್ಮನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ಪ.
ಹೃದಯಹೊಲವನು ಮಾಡಿ ಮನವ ನೇಗಿಲ ಮಾಡಿ |ಶ್ವಾಸೋಚ್ವಾಸ ಎರಡೆತ್ತಮಾಡಿ ||ಜಾÕನವೆಂಬ ಹಗ್ಗ ಕಣ್ಣಿಯ ಮಾಡಿ ||ನಿರ್ಮಮವೆಂಬ ಗುಂಟೆಲಿ ಹರಗಿರಯ್ಯ 1
ಮದಮತ್ಸರಗಳೆಂಬ ಮರಗಳನೆ ತರಿದು |ಕಾಮಕ್ರೋಧಗಳೆಂಬ ಕಳೆಯ ಕಿತ್ತಿ ||ಪಂಚೇಂದ್ರಿಯವೆಂಬ ಮಂಚಿಕೆಯನೆ ಹಾಕಿ |ಚಂಚಲವೆಂಬ ಹಕ್ಕಿಯ ಹೊಡಿಯಿರಯ್ಯ 2
ಉದಯಾಸ್ತಮಾನವೆಂಬ ಎರಡು ಕೊಳಗದಲಿ |ಆಯುಷ್ಯವೆಂಬ ರಾಶಿ ಅಳೆಯುತಿರೆ ||ಸ್ವಾಮಿ ಶ್ರೀ ಪುರಂದರವಿಠಲನ ನೆನೆದರೆ |ಪಾಪ ರಾಶಿಯ ಪರಿಹರಿಸುವನಯ್ಯ 3
****