ವಿಜಯದಾಸ
ನಿತ್ಯ ತೃಪ್ತಾ
ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ ಪ
ದರುಶನಕೆ ಬಂದವ ನಾನಲ್ಲವೆಂದು ನಾನಂದು
ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ
ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು
ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ1
ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು
ಸರುವ ಚೇತನ ಜಡ ಮತ್ತೆ ಮತ್ತೆ
ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ
ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ 2
ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ
ಅಪ್ರಮೇಯ ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ
ಏನೆಂಬೆ ತಿರುವೇಂಗಳೇಶ ನಿನ್ನಾಟಕ್ಕೆ 3
ಮಿಕ್ಕ ಮಂದಜನಕೆ ನಿನ್ನ ಭಕುತರ ಮೇಲೆ
ಭಕುತಿ ಪುಟ್ಟುವುದಕ್ಕೆ ನಾ ಪೇಳಿದದ್ದು
ಅಕಟಕಟ ನಿನ್ನ ದೊರೆತನಕೆ ಏನೆಂಬೆ
ತಕ್ಕ ಮಾತುಗಳೇನೊ ಆಲೋಚಿಸಿ ನೋಡೆ 4
ಹೊನ್ನು ಹಣ ತೂಗಬೇಕಾದರೆ ಮೊದಲಿಗೆ
ಚಿನ್ನ ಹಾಕುವರೇನೊ ಚಿನ್ಮಯರೂಪ
ಮುನ್ನೆ ನಿನ್ನವರ ದರುಶನವಾದ ಮೇಲೆ ಪಾ
ವನ್ನ ಶಾರೀರನೆ ನಿನ್ನ ಕಾಂಬುವದುಚಿತ 5
ಜರೆಮರಣರಹಿತ ಸುಜನರ ಪರಿಪಾಲಾ ನಿ
ನಿತ್ಯ ವಜ್ರಪಂಜರಾ
ಜರಗೆ ವರವಿತ್ತ ದನುಜರ ವಂಶನಾಶಾ ನಿ
ರ್ಜರ ನದಿ ಜನಕಾಂಬುಜ ರವಿ ನಯನ ದೇವಾ 6
ಸ್ಥೂಲಮತಿಯಿಂದ ಪೇಳಿದೆನೆಂದು ಚನ್ನಾಗಿ
ಲಾಲಿಸು ಲಲಿತಾಂಗಿ ಲಕುಮಿ ರಮಣಾ
ನೀಲಗಿರಿ ನಿವಾಸ ವಿಜಯವಿಠ್ಠಲ ವೆಂಕಟವಾಲಗವ ಕೈಗೊಳ್ಳು ಎನ್ನ ಯೋಗ್ಗಿತವರಿತು7
**********
ನಿತ್ಯ ತೃಪ್ತಾ
ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ ಪ
ದರುಶನಕೆ ಬಂದವ ನಾನಲ್ಲವೆಂದು ನಾನಂದು
ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ
ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು
ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ1
ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು
ಸರುವ ಚೇತನ ಜಡ ಮತ್ತೆ ಮತ್ತೆ
ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ
ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ 2
ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ
ಅಪ್ರಮೇಯ ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ
ಏನೆಂಬೆ ತಿರುವೇಂಗಳೇಶ ನಿನ್ನಾಟಕ್ಕೆ 3
ಮಿಕ್ಕ ಮಂದಜನಕೆ ನಿನ್ನ ಭಕುತರ ಮೇಲೆ
ಭಕುತಿ ಪುಟ್ಟುವುದಕ್ಕೆ ನಾ ಪೇಳಿದದ್ದು
ಅಕಟಕಟ ನಿನ್ನ ದೊರೆತನಕೆ ಏನೆಂಬೆ
ತಕ್ಕ ಮಾತುಗಳೇನೊ ಆಲೋಚಿಸಿ ನೋಡೆ 4
ಹೊನ್ನು ಹಣ ತೂಗಬೇಕಾದರೆ ಮೊದಲಿಗೆ
ಚಿನ್ನ ಹಾಕುವರೇನೊ ಚಿನ್ಮಯರೂಪ
ಮುನ್ನೆ ನಿನ್ನವರ ದರುಶನವಾದ ಮೇಲೆ ಪಾ
ವನ್ನ ಶಾರೀರನೆ ನಿನ್ನ ಕಾಂಬುವದುಚಿತ 5
ಜರೆಮರಣರಹಿತ ಸುಜನರ ಪರಿಪಾಲಾ ನಿ
ನಿತ್ಯ ವಜ್ರಪಂಜರಾ
ಜರಗೆ ವರವಿತ್ತ ದನುಜರ ವಂಶನಾಶಾ ನಿ
ರ್ಜರ ನದಿ ಜನಕಾಂಬುಜ ರವಿ ನಯನ ದೇವಾ 6
ಸ್ಥೂಲಮತಿಯಿಂದ ಪೇಳಿದೆನೆಂದು ಚನ್ನಾಗಿ
ಲಾಲಿಸು ಲಲಿತಾಂಗಿ ಲಕುಮಿ ರಮಣಾ
ನೀಲಗಿರಿ ನಿವಾಸ ವಿಜಯವಿಠ್ಠಲ ವೆಂಕಟವಾಲಗವ ಕೈಗೊಳ್ಳು ಎನ್ನ ಯೋಗ್ಗಿತವರಿತು7
**********