Showing posts with label ಶ್ರೀನಿವಾಸನೆ ನಿನ್ನ ವರ್ಣಿಸಲು ಅಳವೇ gopalakrishna vittala. Show all posts
Showing posts with label ಶ್ರೀನಿವಾಸನೆ ನಿನ್ನ ವರ್ಣಿಸಲು ಅಳವೇ gopalakrishna vittala. Show all posts

Monday, 2 August 2021

ಶ್ರೀನಿವಾಸನೆ ನಿನ್ನ ವರ್ಣಿಸಲು ಅಳವೇ ankita gopalakrishna vittala

ಶ್ರೀನಿವಾಸನೆ ನಿನ್ನ | ವರ್ಣಿಸಲು ಅಳವೇ

ಮಾನನಿಧಿ ಗುಣಪೂರ್ಣ | ನಿನ್ನಂಘ್ರಿ ಭಜಿಪರ

ಸಾನುರಾಗದಿ ಮುನ್ನ | ಪರಿಹರಿಸು ಬನ್ನ ಪ.

ವೈನತೇಯನ ವರೂಥ ನಾನಾ

ಹಾರ ಪದಕದಿ ಮೆರೆವ ಸುಂದರ

ಕಾಮಪೂರ್ಣ ಮುಖಾರವಿಂದನ

ನೀ ಮನದಿ ತೋರುತ್ತ ಪೊರೆಯೊ ಅ.ಪ.

ಶೇಷಪರ್ವತವಾಸ | ಭಕ್ತರನು ಸಲಹೋ

ಈ ಕ್ಷಿತಿತ್ರಯಕೀಶ

ಪೋಷಿಸುವೋ ಭಕ್ತರವಾಸಿ ನಿನ್ನದೊ ಶ್ರೀಶ ಲಕ್ಷ್ಮೀನಿವಾಸ

ದೋಷದೂರನೆ ಎನ್ನ ಅವಗುಣ

ದೋಷಗಳನೆಣಿಸದಲೆ ಸಲಹೊ

ಶೇಷವರ ಪರ್ಯಂಕಶಯನ ವಿ-

ಭೀಷಣ ಪ್ರಿಯ ಭೀಷ್ಮವರದ1

ಮಾಘ ಸಪ್ತಮಿ ಕುಂಭ | ಸಂಕ್ರಮಣ ದಿವ್ಯ

ಯೋಗ ಶುಕ್ಲದಿ ಎಂಬ | ಸ್ಥಿರವಾರದಲ್ಲಿ

ಆಗ ರಥದಲ್ಲಿ ಬಿಂಬ | ಭಕುತರಿಗೆ ಕಾಂಬ

ಜಾಗು ಮಾಡದೆ ಸೂರ್ಯಮಂಡಲ

ಬೇಗ ಬಿಗಿದಿಹ ಸಪ್ತ ಹಯಗಳ

ಬಾಗಿ ಭಜಿಸಲು ಭಕ್ತವರ್ಗವು ನೀ

ಜಗದಿ ಮೆರೆಯುತ್ತ ಪೊರೆದೆ 2

ವಿೂನನಾಗಿ ಮತ್ತೆ ವೇದವನೆ | ತಂದು

ಆ ನಳಿನಭವಗಿತ್ತೆ ಅಲ್ಲಿಂದ ಸುರರಿಗೆ

ಪ್ರಾಣದಾನವನಿತ್ತೆ ಮೇದಿನಿಯ ಪೊತ್ತೆ

ನಾನೆ ಜಗಕೆಂಬ ದಾನವನ ಕೊಂದು

ದಾನ ಬೇಡಿ ಭೂಮಿ ಅಳೆದು

ಮಾನಿನಿ ಶಿರ ತರಿದು ಸೀತಾ

ಮಾನಿನಿಗೆ ಅಂಬುಧಿಯ ಬಿಗಿದೆ 3

ಮಾನಿನಿಯರಿಗೆ ಕಾಣದೆ | ಬೆಣ್ಣೆಯನು ಕದ್ದು

ಮಾನವೆಲ್ಲವ ಕಳೆದೆ ಅಲ್ಲಿಂದ ಮುಂದೆ

ಮಾನಿನಿಯರ ವ್ರತವಳಿದೆ ಮಾನವ ಬಿಟ್ಟು ನಿಂದೆ

ಏನ ಹೇಳಲಿ ಹಯವನೇರಿ

ದಾನವರ ಸಂಹರಿಸಿ ಮೆರೆದೆ

ನಾನಾ ರೂಪ ನಾಟಕಧರ

ನೀನೀ ಪರ್ವತದಲಿ ನಿಂದಿಹೆ 4

ದೇಹವ್ಯಾಪ್ತಕ ನೀನೆ | ದೇಹಗಳ ಕೊಟ್ಟು

ಮೋಹಗೊಳಿಸುವ ನೀನೆ

ದೇಹಸ್ಥನಾಗಿ ತೋರುವ ಬಿಂಬ ನೀನೆ | ಜೀವಾಕಾರನೆ

ಈ ಹದನ ಎನಗಿನ್ನು ತಿಳಿಯದೊ

ಮೋಹ ಹರಿಸಿ ಸುe್ಞÁನ ನೀಡೊ

ಸ್ನೇಹ ಗೋಪಾಲಕೃಷ್ಣವಿಠ್ಠಲ

ಶ್ರೀ ಹರಿಯೆ ಹೃದಯದಲಿ ನಿಲಿಸೊ 5

****