Showing posts with label ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ vijayaramachandra vittala. Show all posts
Showing posts with label ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ vijayaramachandra vittala. Show all posts

Friday, 6 August 2021

ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 

ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ

ಘನವಲ್ಲ ನಿನಗಿದು ತೆರೆದ ಬೀಗ ಜೋಡಿಸುವುದು ಪ

ವದನದಿಂದಲಿ ನಿನ್ನ ಮಹಿಮೆ ಪೊಗಳಲರಿಯದೆ

ಸದನದಿ ಅನ್ಯರ ಪಾಡುತ್ತಿದ್ದೆನೇನೋ 1

ಪಾಡದಿದ್ದರೆ ನಾನೊಬ್ಬ ನೋಡಿ ಬಂದದ್ದೇನೊ ನಿನಗೆ

ಬೇಡಿಕೊಂಬೆನೊ ಬಾಯ ಬೀಗ ತÉಗೆಸೊ ಹರಿಯೆ 2

ವೇದ ಪೊಗಳಲರಿಯದ ವಿಜಯ ರಾಮಚಂದ್ರವಿಠಲನ್ನ

ಹಾದಿ ತೋರಿಸೆಂದು ನಾ ಸ್ತುತಿಪೆನೊ

ಮೋದಮಯ ದೇವ 3

***