Showing posts with label ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯ mahipati. Show all posts
Showing posts with label ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯ mahipati. Show all posts

Wednesday, 1 September 2021

ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಪ  


ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 

ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 

ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 

ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 

ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5

***