..
'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+
ವರ ಮಂತ್ರಾಲಯ ವಾಸಾ | ನಿನ್ನ ಚರಣವ
ನಂಬಿದೆನು ಸರ್ವೇಶಾ
ಕರುಣದಿಂದಲಿ ಕಾಯೊ ಯನ್ನಧೀಶಾ | ನಿನ್ನ
ಸ್ಮರಣೆಯೆ ಉಲ್ಲಾಸಾ 1
ಹೆಚ್ಚು ಬೇಡುವುದಿಲ್ಲ ನಿನ್ನಾ | ಜಗದಿರಚ್ಚು
ಮಾಡಲಿಬೇಡ ಇನ್ನಾ
ಇಚ್ಛಿಸುವೆ ಭಕ್ತಿರನ್ನಾ | ಯನಗೆ ಪ್ರತ್ಯಕ್ಷನಾಗೂಯತಿರನ್ನಾ 2
ಎಂಥೆಂಥವರನು ಪೊರೆದೇ | ಯನ್ನಂಥವರು ನಿನಗೆ ಹಿರಿದೇ
ಪಂಥದಿಂದಲಿ ನಾನಿನ್ನ ಕರದೇ | ಮನದ
ಚಿಂತೆಯನೀ ತರಿದೇ 3
ನಿನ್ನ ಮೆಚ್ಚಿಸಲೆನಗೆ ಶಕ್ತಿ | ಘನ್ನ ಮಹಿಮನೇಕೊಡು ಭಕ್ತಿ
ಇನ್ನು ಬೇಡುವುದೆಲ್ಲ ವಿರಕ್ತೀ | ಎನಗೆ
ಚೆನ್ನಾಗಿ ಪಾಲಿಸು ಮುಕ್ತೀ 4
ಪ್ರಥಮದಲಿ ಪ್ರಹ್ಲಾದನಾಗೇ | ಅಲ್ಲಿದಿತಿವಂಶದಲಿ ನೀ ಪೋಗೇ
ಹತ ಮಾಡದೆ ಅವನೀಗೇ | ಪಿತಗೆ ಸದ್ಗತಿಯಿತ್ತೆಯೋಗೀ 5
ಘೋಷಿಸಲೇ ನಿನ್ನ ವ್ಯಾಸ ಮೂರ್ತಿ | ಹದಿನಾಲಕ್ಕು
ಲೋಕದಲಿ ಪ್ರಖ್ಯಾತಿ
ಏನೆಂಧೆÉೀಳಲಿ ವಾರ್ತೀ | ರಾಶಿರಾಶಿತುಂಬಿದವು ನಿನ್ನ ಕೀರ್ತೀ 6
ಶ್ರೀರಾಘವೇಂದ್ರ ಮುನಿರಾಯಾ | ಸದ್‍ಯೋಗಿಗಳ
ಮನಸಿಗೆ ಪ್ರೀಯಾ
ಮೂಲರಾಮನಿಗೆ ನೀ ಪ್ರೀಯಾ | ಬೇಗ ಎದ್ದು
ಬಂದು ಪಿಡಿಕೈಯಾ 7
ಸತ್ಯ ಸಂಧರು ನೀವೆನಿಸೀ | ದೊಡ್ಡ ಉತ್ತರಾದಿ ಮಠದಿ ಜನಿಸೀ
ಭಕ್ತರನೆಲ್ಲಾ ಸ್ವೀಕರಿಸೀ | ಮಧ್ವಮತವನುದ್ಧರಿಸೀ 8
ಬಿದ್ದೆ ನಿನ್ನ ಪಾದಕೈಯಾ | ಎನ್ನ ವುದ್ಧಾರ ಮಾಡುಜೀಯಾ
ವಿದ್ವಾಂಸರಿಗೆ ನೀ ಘೇಯಾ | ಬೇಗ ಎದ್ದು ಬಂದು ಪಿಡಿಕಯ್ಯಾ 9
ನರಸಿಂಹ ವಿಠಲನ ಪ್ರೀಯಾ | ಕರೆಸಿದ್ದು ನೀ ಎನ್ನ ಖರೆಯಾ
ಮನಸಿನೊಳಿದ್ದದ್ದು ಅರಿಯಾ | ನಮಸ್ಕರಿಸಿ ಬೇಡುವೆನು
ಮಹರಾಯಾ 10
***