Showing posts with label ನಮಸ್ತೇ ವಿಮಲೇ ಕೋಮಲೆ ರಮಾದೇವಿ ನಮಸ್ತೇ hayavadana NAMASTE VIMALE KOMALE RAMAADEVI NAMASTE. Show all posts
Showing posts with label ನಮಸ್ತೇ ವಿಮಲೇ ಕೋಮಲೆ ರಮಾದೇವಿ ನಮಸ್ತೇ hayavadana NAMASTE VIMALE KOMALE RAMAADEVI NAMASTE. Show all posts

Sunday, 19 December 2021

ನಮಸ್ತೇ ವಿಮಲೇ ಕೋಮಲೆ ರಮಾದೇವಿ ನಮಸ್ತೇ ankita hayavadana NAMASTE VIMALE KOMALE RAMAADEVI NAMASTE



ನಮಸ್ತೇ ವಿಮಲ ಕೋಮಲೆ ರಮಾದೇವಿ
ನಮಸ್ತೇ ನಮಸ್ತೇ||

ತರುಣಿ ಶಿರೋಮಣಿ ನಿನ್ನ ಶೀಲಸೌಂದರ್ಯವನು
ಧರೆಯೊಳಗೆ ವರ್ಣಿಸುವ ಕವಿಯದಾವ|
ಸ್ವರಮಣನೆಂದೆನಿಪ ರಮಣನುರದೊಳೆಂದೆಂದು
ಅರಮನೆಯ ಮಾಡಿ ಮೆರೆವ ಭಾಪುರೆ ದೇವಿ||

ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ
ನಿನ್ನ ತಾರುಣ್ಯ ಲಾವಣ್ಯಗಳನು|
ಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ ಜಗ-
ನ್ಮಾನ್ಯೆ ಚೈತನ್ಯೆ ಬಹು ಗುಣಗಣಸದನೆ||

ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು
ಅನಂತ ಕರ ನೇತ್ರ ವಕ್ತ್ರಗಳನು|
ಪೂರ್ಣ ಹಯವದನ ಕೈಕೊಂಡ ನಿನ್ನಯ ಗಂಡ
ಸ್ವರ್ಣಸಮವರ್ಗೆ ಕರ್ಣಾಯತಾಕ್ಷಿ ದೇವಿ||
***

ನಮಸ್ತೇ ನಮಸ್ತೇ ನಮಸ್ತೇ ವಿಮಲೇ
ಕೋಮಲೆ ರಮಾದೇವಿ ನಮಸ್ತೇ ನಮಸ್ತೇ||

ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವನು
ಧರೆಯೊಳಗೆ ವರ್ಣಿಸುವ ಕವಿಯದಾವ
ಸ್ವರಮಣನೆನಿಪ ರಮಣನ ಉರದೊಳೆಂದೆಂದು
ಅರಮನೆಯ ಮಾಡಿ ಮೆರೆವ ಭಾಪುರೆ ದೇವಿ || 1 ||

ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ
ನಿನ್ನ ತಾರುಣ್ಯ ಲಾವಣ್ಯಗಳನು
ಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ
ಜಗನ್ಮಾನ್ಯೆ ಚೈತನ್ಯೆ ಬಹು ಗುಣಗಣಸದನೆ || 2 ||

ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು
ಅನಂತ ಕರ ನೇತ್ರ ವಕ್ತ್ರಗಳನು
ಪೂರ್ಣ ಹಯವದನ ಕೈಕೊಂಡ ನಿನ್ನಯ ಗಂಡ
ಸ್ವರ್ಣಸಮವರ್ಗೆ ಕರ್ಣಾಯತಾಕ್ಷಿ ದೇವಿ || 3 ||
***

Namastē namastē namastē vimalē

kōmale ramādēvi namastē namastē||

taruṇi śirōmaṇi ninna śīla saundaryavanu dhareyoḷage varṇisuva kaviyadāva svaramaṇanenipa ramaṇana uradoḷendendu aramaneya māḍi mereva bhāpure dēvi || 1 ||

tanna maiyinda makkaḷa sr̥jisi yugayugadi ninna tāruṇya lāvaṇyagaḷanu mannisi poreva hariya paṭṭada ramaṇi jaganmān’ye caitan’ye bahu guṇagaṇasadane || 2 ||

ninnaṅgavappalu nōḍalu mukhava cumbisalu ananta kara nētra vaktragaḷanu pūrṇa hayavadana kaikoṇḍa ninnaya gaṇḍa svarṇasamavarge karṇāyatākṣi dēvi || 3 ||
***