Showing posts with label ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ purandara vittala. Show all posts
Showing posts with label ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ purandara vittala. Show all posts

Wednesday, 4 December 2019

ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ purandara vittala

ಪುರಂದರದಾಸರು
ಆಗ ಮುಖಾರಿ. ಝಂಪೆ ತಾಳ)

ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ
ಕಾಕು ಮಾಡದೆ ಕಾಯೊ ಸಂಗದೊಳು ಬಳಲಿದೆನು

ಕಂದರ್ಪಬಾಧೆಯಿಂ ಮಾನಿನಿಯರೊಶನಾಗಿ
ಮಂದಮತಿಯಿಂದ ನಾ ಮರುಳಾದೆನು
ಸಂದಿತೈ ಯೌವನವು ಬುದ್ಧಿ ಬಂದಿತು ಈಗ
ಸಂದೇಹಬಡದೆ ನೀ ಕರುಣಿಸೈ ಎನ್ನ

ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ಕಾಡುತಿಹರು
ಮುಂಡ ಮೋಚಿದೆ ನಾನು ಇನ್ನಾರು ಗತಿಯೆನಗೆ
ಪುಂಡರೀಕಾಕ್ಷ ನೀ ಪಾಲಿಸೈ ತಂದೆ

ಅಟ್ಟ ಮೇಲೆ ಒಲೆಯು ಉರಿವಂತೆ ಎನಗೀಗ
ಕೆಟ್ಟ ಮೇಲೆ ಅರಿವು ಬಂದಿತಯ್ಯ
ನೆಟ್ಟನೆ ಪುರಂದರ ವಿಟ್ಠಲನೆ ಕೈ ಬಿಡದೆ
ದೃಷ್ಟಿಯಿಂದಲಿ ನೋಡಿ ಪರಿಪಾಲಿಸಯ್ಯ
***


pallavi

EkennoLintu krpeyilla hariye kAru mADade kAyo sangadoLu baLalidEnu

caraNam 1

kandarpa bAdheyim kAminiyarosanAgi mandamatiyinda nA maruLAdenu
sanditai yauvanavu buddhi bandidu Iga sandEha baDade nI karuNIsai enna

caraNam 2

heNDadiyu kaDegaNNininda nODuvaLIga hiNDu makkaLu enna kADutiharu
muNDa mOcide nAnu innAru gatiyenage puNDarIkAkSa nI pAlisai tande

caraNam 3

aTTa mEle oleyu urivante enagIga keTTa mEle arivu bandidayya
neTTane purandara viTTalane kai piDide drSTiyindali nODi paripAlisayya
***

ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ 
ಕಾಕಮಾಡದೆ ಕಾಯೊ ಸಂಗದೊಳು ಬಳಲಿದೆನು ಪ

ಕಂದರ್ಪಬಾಧೆಯಿಂ ಮಾನಿನಿಯ ವಶನಾಗಿಮಂದಮತಿಯಿಂದ ನಾ ಮರುಳಾದೆನೋ ||ಸಂದಿತೈ ಯೌವನವು ಬುದ್ದಿ ಬಂದಿತು ಈಗಸಂದೇಹಪಡದೆ ನೀ ಕರುಣಿಸೈ ಎನ್ನ 1

ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗಹಿಂಡುಮಕ್ಕಳು ಎನ್ನ ತಿನ್ನುತಿಹರು ||ಮುಂಡಮೋಚಿದೆ ನಾನು ಇನ್ನಾರು ಗತಿಯೆನಗೆಪುಂಡರೀಕಾಕ್ಷನೀ ಪಾಲಿಸೈ ಎನ್ನ2

ಅಟ್ಟಮೇಲೊಲೆಯುರಿಯುವಂತೆಹರಿಎನಗೀಗಕೆಟ್ಟ ಮೇಲರಿವು ತಾ ಬಂದಿತಯ್ಯ ||ನೆಟ್ಟನೇಪುರಂದರವಿಠಲನೆ ಕೈ ಬಿಡದೆದಿಟ್ಟಿಯಲಿ ನೋಡಿ ಪರಿಪಾಲಿಸೈ ಎನ್ನ 3
***********