..
kruti by radhabai
ಅಂದರೇನೋ ಆ ನಾರಿಯರು ನಿನ್ನಂದರೇನೋ ಪ
ಅಂದವರ ಬಾಯಿಗೆ ಅಂಕುಶನಾನ್ಹಾಕುವೆ ಮುದ್ದು
ಕಂದಯ್ಯ ನಿನ್ನಂದಾರೇನೋ ಅ.ಪ
ಬಿಸಿಲೊಳು ಮನೆಕಟ್ಟಿ ಬಿಸಿಬಿಸಿಯಾಗಿ ಹಾಲೆರದೂ
ಶಶಿ ಮುಖಿಯರ ಕೋಲಾಪಿಡಿದೂ
ಕೊಲ್ಲೀಸುವೆ ನೀನಳದಿರಣ್ಣಾ1
ನಿನ್ನಾಡಿಕೊಂಬೋರಚೆನ್ನಾಗಿ ಹಿಡಿದೆಳತಂದು
ಬೆನ್ಹಾ ಹೊಯಿಸುವೆನೀನಳಬೇಡವೋ ಚಿನ್ನಾ 2
ಇನ್ನಾದರೆನ್ನಯ ಮಾತು
ಪೇಳುವೆ ಕೇಳ್ ರಂಗಾ ನಾರಿಯರ ಸಂಗಾ ಪಡಿಸೋಡು
ಬಲುಭಂಗಾ ಪೋಗಾಬೇಡಾ 3
ಪಾಲು ಮೊಸರನ್ನವ ಕಲೆಸಿ ನಾ ಉಣಿಸುವೆ
ಸದ್ದು ಮಾಡದೆ ಉಂಡು ನಿದ್ರೆ ಮಾಡೆನ್ನ ಕಂದಾ 4
ಮುದ್ದು ಕಂದಯ್ಯ ನೀನು ಮಡುವ ಧುಮಿಕಿದರೆ
ಮನದಾ ಸಂತಾಪ ಸೈರಿಸಲಾರೆನೋ 5
ಶೇಷ ಗಿರೀಶನೆ ದಾಸರಧಿನನೇ
ಶೇಷ ಶಯನನೇ ವೇಂಕಟ ವಿಠಲನೇ 6
***