Showing posts with label ಉಗಾಭೋಗ ugabhoga ankita hayavadana. Show all posts
Showing posts with label ಉಗಾಭೋಗ ugabhoga ankita hayavadana. Show all posts

Tuesday 1 June 2021

ಉಗಾಭೋಗ ugabhoga ankita hayavadana



ಶ್ರೀ ವಾದಿರಾಜರ ಉಗಾಭೋಗ

ಹನುಮ ಭೀಮ ಮಧ್ವಮುನಿರಾಯ

ಗುಣಧಾಮ ಹರಿಪಾದ ಸೇವೆಯೊಳಧಿಕ ಪ್ರೇಮ

ಅಂಜನೇಯ ವರಪುತ್ರ ಅಕಳಂಕ ಚರಿತ್ರ

ಸಂಜೀವ ಗಿರಿಧರನೆ ಸಾಧುವರನೆ

ಸೀತೆಗುಂಗುರವಿತ್ತು ಪ್ರೀತಿ ಪಡಿಸಿದ ಹನುಮ 

ರಾಮದೂತ ನೆನಿಸಿಕೊಂಡೆ ಶರಣು ಶರಣು

ಶರಣೆಂಬೆ ನಾ ನಿನ್ನ ಚರಣಗಳಿಗೆ

ದುಷ್ಟ ಸಂಹಾರ ಭಕ್ತರುದ್ಧಾರ

 ಹಯವದನ ದೂತ ದುರಿತ ದೂರ

****


ನಿನ್ನ ನಂಬಿದೆ ಕೃಷ್ಣಾ ಅನ್ಯರೊಬ್ಬರ ಕಾಣೆ

ಪನ್ನಗರಕ್ಷನೆ ಬಾರೋ , ಇರುಳು ಹಗಲು ನಿನ್ನ ಚರಣಕ್ಕೆ ಮೊರೆಹೊಕ್ಕೆ

ಸರಿಯಾರೋ ಇರೇಳು ಜಗದೊಳು ಹಯವದನ 


***

ಅಡಿಗಾಧಾರವಿಲ್ಲ ಹಿಡಿವುದಕೆ ಕೊಂಬಿಲ್ಲ

ಕಡೆಹಾಯಿಸುವರಿಲ್ಲ ಕಷ್ಟಪಟ್ಟೇನಲ್ಲ

ಕಣ್ಣೀರು ಬಿಡಲಿಲ್ಲ ಕಾಯಸುಖಪಡಲಿಲ್ಲ

ಉಣಹೋಗಿ ಬಾಯ ಮರೆತಂತಾಯಿತಲ್ಲ

ಬಡತನವು ಬಿಡಲಿಲ್ಲ ಭಂಗಪಟ್ಟೇನಲ್ಲ

ಗರುಡ ಸರ್ಪದ ಸ್ನೇಹದಂತಾಯಿತಲ್ಲ

ಎನ್ನ ಮನದುಬ್ಬಸವ ಸ್ವಾಮಿ ಶ್ರೀಹರಿಯೇ ಬಲ್ಲ

ಇನ್ನಾರಿಗುಸುರಲೋ ಶ್ರೀ ಹಯವದನರಾಯ |

***

ರೋಮಕೋಟಿಲಿಂಗನೆಂದೆನಿಸಿದ ಹನುಮನೊಂದೊಂದು
ರೋಮಕೆ ಕೋಟಿ ಶಿವರ ಮಾಡುವ ಶಕ್ತಕಾಣಿರೊ 
ಆ ಮಹಾತ್ಮನ್ನ ತನ್ನ ಆಳು ಮಾಡಿ ನಡೆಸಿಕೊಂಡ 
ರಾಮಚಂದ್ರನೇ ಜಗಕೆ ಪರದೈವಕಾಣಿರೊ
ಸ್ವಾಮಿ ಹಯವದನ ವೇದವ ತಂದು ಕಮಲಜನ
ಕಾಮಿತವನಿತ್ತವನಾಗಿ ಅವನೇ ಜಗದೊಡೆಯ

****

ಅರ್ಚಿಸುವೆನೆಂಬಾಸೆ ಘನವಯ್ಯ ಹರಿ ನಿನ್ನ

ಮೆಚ್ಚಿಸಿ ಬದುಕುವೆನೆಂಬ ಮನದಾಸೆ ಘನವಯ್ಯ

ಕೆಚ್ಚಿ ಹಾರಿ ಹೋರಿ ಬೆಚ್ಚಿಸಿ ಉದರದ

ಕುಚ್ಚು ಪೆಚ್ಚಿಪ ಬಲುಹುಳಿಯಂತೆ 

ಹುಚ್ಚು ಮಾಡಿಕೊಳುತಿದೆ

ಅಚ್ಚ ಸರ್ವೇಶ ನಿಚ್ಚದಲಚ್ಚ್ಯುತ

ನಿನ್ನ ಮೆಚ್ಚಿದೆನೋ ಸಚ್ಚಿದಾನಂದ 

ಶ್ರೀ ಹಯವದನ |

***


ಗುರು ಭಕುತಿ ಬೇಕು  ಹಿರಿಯರ ಕರುಣೆ ಬೇಕು | 
ಹರಿಕಥೆ ನಿತ್ಯ ಕೇಳುತಿರಬೇಕು ವಿರಕುತಿ ಬೇಕು ||
ವಿಷ್ಣುವಿನಾರಾಧನೆ ಬೇಕು  ವರ ಮಂತ್ರ ಜಪ ಬೇಕು |
ತಪ ಬೇಕು  ಪರಗತಿಗೆ ||
ಸಿರಿ ಹಯವದನನ  ಪರಮಾನುಗ್ರಹ  ಬೇಕು | 
ವಿಷಯ ನಿಗ್ರಹ ಬೇಕು ||

gurubakuthi bEku hiriyara karuNa bEku

harikathegaLa nitha keLutirabEku virakti bEku

vishnu vinaradane bEku varamantra japa bEku

tapa beku paragatige viSayada nigraha bEku

shrI hayavadanana paramAnugraha bEku

****
 

ಅನ್ನದಾಸೆಗೆ ಪರರ ಮನೆಯ ಬಾಗಿಲ ಕಾಯ್ದು

ಅನೇಕ ಬಾಧೆಗಳಿಂದ ನೊಂದೆನಯ್ಯ

ಅನ್ಯತ್ರ ಪೋಡಮಟ್ಟು ಪೋಗಲೀಸರು ಅವರು

ಮನ್ನಿಸಿ ಕೃಪೆಯಿಂದ ಕೂಡಿಕೊಂಡಿರಲು

ಅನಾಥಬಂಧು ಶ್ರೀ ಹಯವದನನೇ

***


ನಿನ್ನ ಮನೆಯ ಕುನ್ನಿಯಂಜಲಿಕ್ಕಿ

ನೀನು ಪೊರೆಯೋ ತಂದೆ |

ಒಂದು ಬೊಮ್ಮ ಚಿತ್ತು ಒಂದು ಜೀವ ಚಿತ್ತು ಇಂ-

ತೆಂದು ಶೃತಿಸ್ಕಂಧ ಚೇತವೆಲ್ಲ ಗ್ರಂಥಹಾಸ್ಯ-

ದಿಂದ ಒರೆಯೆ ಹರಿ ಜಡನೋ ಹರ ಜಡನೋ

ಮಂದಹಾಸದಿಂದ ಜಡರು ಮನುಮುನಿಗಳೆಲ್ಲ

ಇಂಥಾ ಶಿವನ ವಹಿಸಿಕೊಂಡು ವಾದಿಸುವವರು

ಹಿಂದು ಮುಂದರಿಯರೆಂದು ಹಯವದನ ನಗನೇ |

***


ನಿನ್ನ ಧ್ಯಾನದ ಶಕ್ತಿಯ ಕೊಡೊ
ಅನ್ಯರಲಿ ವಿರಕ್ತಿಯ ಕೊಡೊ
ನಿನ್ನ ನೋಡುವ ಯುಕ್ತಿಯ ಕೊಡೊ
ನಿನ್ನ ಪಾಡುವ ಭಕ್ತಿಯ ಕೊಡೊ ನಿ-
ನ್ಹತ್ತೆ ಬರುವ ಸಂಪತ್ತಿಯ ಕೊಡೊ
ಚಿತ್ತದಿ ತತ್ತ್ವದ ಕೃತ್ಯವ ತೋರೊ
ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ
ಅತ್ತತ್ತ ಮಾಡೊ ಭವಕತ್ತಲೆಯೆನಗೆ

ಮುತ್ತಿದೆ ಹಯವದನ || – ಉಗಾಭೋಗ

********

ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ

ಮೌಳಿಯ ಮೇಲಾಜಲವ ಧರಿಸಿದವನೊಬ್ಬ

ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ

ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ

ಆಲೋಚನೆಯಲ್ಲಿ ಬಲ್ಲವರಿಗೆ ಸಂಶಯ ಸಲ್ಲ

ಮಾಲೆಯನು ಮಹಲಕುಮಿ ಹಯವದನಿಗಿತ್ತಳಾಗಿ |

***


ಗುರು ಭಕ್ತಿ ಬೇಕು ಹಿರಿಯರ ಕರುಣವಿರಬೇಕು
ಹರಿಕಥೆಗಳ ನಿತ್ಯ ಕೇಳುತಲೇ ಇರಬೇಕು
ವಿರಕುತಿ ಬೇಕು ವಿಷ್ಣು ಆರಾಧನೆ ಬೇಕು
ವಿಷಯ ನಿಗ್ರಹ ಬೇಕು ವರ ಮಂತ್ರ ಜಪ ಬೇಕು
ಸಿರಿ ಹಯವದನನ  ಪರಮಾನುಗ್ರಹ ಬೇಕು.//
**********


ಕಾಶಿಯೊಳು ರಾಮಮಂತ್ರೋಪದೇಶ ಮಾಳ್ಪ

ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ

ಆ ಶಿವನ ಮಂತ್ರದೇವತೆ ತಾರಕಬೊಮ್ಮನೆನಿಪ

ವಾಸುದೇವನೆ ಜಗಕೆ ಪರದೈವ ಕಾಣಿರೋ

ಈ ಸುತತ್ತ್ವವ ಪೇಳ್ವ ಹರಗೆ ನಮ್ಮ ಹಯವದನ

ಏಸು ಮನ್ನಣೆಯ ಮಾಡಿದರುಚಿತ ಕಾಣಿರೋ |

***


ನಲ್ಲನಿಲ್ಲದ ಸತಿ ಚಲುವಿದ್ದು ಫಲವೇನು

ಸಲ್ಲದ ಹೆಣ್ಣಿಗೆ ಸವಿಯಿದ್ದು ಫಲವೇನು 

ಬಲ್ಲವರಿಲ್ಲದ ಸಭೆಯಿದ್ದು ಫಲವೇನು | ನಮ್ಮ-

ನೊಲ್ಲದ ಹಯವದನ ಎಲ್ಲಿದ್ದರೇನು ?

***


ನಿನ್ನ ಧ್ಯಾನದ ಶಕ್ತಿಯ ಕೊಡು

ಅನ್ಯರಲಿ ವಿರಕ್ತಿಯ ಕೊಡು

ನಿನ್ನ ಪಾದಾರವಿಂದದ ಭಕ್ಟಿಯ ಕೊಡು

ನಿನ್ನಲಿ ಭವಸಂಪತ್ತಿಯ ಕೊಡು

ಉನ್ಮತ್ತ ಜನರ ಅತ್ತತ್ತ ನೂಕುವ

ಚಿತ್ತತತ್ತ್ವದ ಕೃತ್ಯವ ಕೊಡು

ಕತ್ತಲೆ ಎನ್ನೊಳು ಭವ ಮುತ್ತಿದೆ ಹಯವದನ

***


ನಿನ್ನ ನಂಬಿದೆ ಕೃಷ್ಣ, ಅನ್ಯರೊಬ್ಬರ ಕಾಣೆ

ಪನ್ನಗ ರಕ್ಷಕನೆ ಬಾರೋ, ಇರುಳು ಹಗಲು ನಿನ್ನ

ಚರಣಕ್ಕೆ ಮೊರೆಹೊಕ್ಕೆ ಸರಿಯಾರೋ

ಈರೇಳು ಜಗದೊಳು ಹಯವದನ |

****


ಮದಮತ್ಸರದಿ ಬಂದು, ಕೆಲವು ಕಾಳವ ಕಳೆದೆ

ಕುದಿವ ಕಾಮಕ್ರೋಧಗಳಲ್ಲಿ ಸಂಕಟಗೊಂಬೆ

ಅಂಧಕನಾಗಿ, ಪರರ ಬೇಡಿ, ಬೇಸರನಾದೆ

ಸಾಧನಸಂಪದಕ್ಕೆ ಹರಿಪಾದವನ್ನು ನೆರೆನಂಬದವರೊಳಗೆ

ಬಹು ವ್ಯಾಧಿಗಳಲ್ಲಿ ಸಂಕಟಗೊಂಬೆ

ಪದುಮನಾಭ ಹಯವದನನ್ನ

ಪಾದವನ್ನು ನಂಬೋ ಮನವೇ |

***


ಮೂಲರೂಪದಿ ಸುರರು ದ್ವಾರಕಾಯಾತ್ರೆಯಲಿ

ಪಾಲಸಾಗರ ಯಾತ್ರೆ ಗರ್ಭಯಾತ್ರೆ ಕೇಳಯ್ಯ

ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ

ಶ್ರೀಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ

ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ

ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ |

***


“ಯಂ ಬ್ರಹ್ಮ ವೇದಾಹಂ ಬ್ರಹ್ಮದೇವ”

ಶೃತಿಶಬ್ಧಬ್ರಹ್ಮವೆಂಬ ವೇದ ಬೋಧಿಸಿತಾಗಿ

ಇಂಥ ಮನುಜರಿಗೆಲ್ಲ ಸದ್ಭಾವವ ಪೇಳ್ವ

ಹೊಂದಿ ಬದುಕು ಹಯವದನನ ಚರಣವ

ಹೊಂದಿ ಬದುಕೋ ಜೀವ ಹರಿಯೇ ನಾನೆನ್ನಬ್ಯಾಡ |

****