..
ಸುಶೀಲೇಂದ್ರ ಸುಶೀಲೇಂದ್ರ
ಅಸುನಾಯಕ ಮತ | ಬಿಸರುಹ ಭಾಸ್ಕರ ಪ
ಕುಂಭಿಣಿದೇವ ಕದಂಬ ವಿನುತ | ಜಿತ
ಶಂಬರಾರಿ ಕರುಣಾಂಬುಧಿ ಗುರುವರ 1
ತುಂಗ ಮಹಿಮಯತಿ ಪುಂಗವರದ | ತ
ರಂಗಿಣಿ ನಿಲಯ ಸುಮಂಗಳ ಚರಿತ 2
ಭಾಗವತ ಪ್ರಿಯ ರಾಘವೇಂದ್ರರರಮ
ರಾಗಪಾತ್ರ ಮಧ್ವಾಗಮಜ್ಞ ಗುರು 3
ಸಾರಿದೆ ಸಂತತ ಸೊರಿವರ್ಯ | ಗುರು
ಧೀರೇಂದ್ರ ಪದ ಸಾರಸ ಮಧಕರ 4
ಶ್ರೀಮನೋವಲ್ಲಭ | ಶಾಮಸುಂದರನ
ಪ್ರೇಮಾನ್ವಿತ ನಿಸ್ಸೀಮ ಮಹಿಮ 5
***