Showing posts with label ಏನು ಗತಿಯೊ ಮುಂದೆನಗೆ prasannavenkata. Show all posts
Showing posts with label ಏನು ಗತಿಯೊ ಮುಂದೆನಗೆ prasannavenkata. Show all posts

Sunday, 10 November 2019

ಏನು ಗತಿಯೊ ಮುಂದೆನಗೆ ankita prasannavenkata

by ಪ್ರಸನ್ನವೆಂಕಟದಾಸರು
ಏನು ಗತಿಯೊ ಮುಂದೆನಗೆ ಗೋವಿಂದಶ್ರೀನಿವಾಸ ರಕ್ಷಿಸದಿರೆ ದಯದಿಂದ ಪ.

ನಿಶಿದಿನ ಹಸಿವುತೃಷೆಸುಡುವ ಕುಮರಿಯುಮಸಿವರ್ಣ ಮಾಡಿ ಕೇರಿಡಿವ ಮೂರುರಿಯು 1

ನಾಚಿಕಿಲ್ಲದ ವಿಷಯಾಸೆಯಸಹ್ಯನೀಚ ದುರುಕ್ತಿಯಸ್ತ್ತ್ರದ ಘನಗಾಯ 2

ಮಾಯದ ಕಡಲೊಳು ಕಟ್ಟಿಹ ಕೊರಳುಆಯಾಸ ಬಡುತ ಬಡುತ ಬಿದ್ದಿತುರುಳು 3

ಎಳ್ಳನಿತು ಜ್ಞಾನ ಅಹಂಕಾರ ಬಹಳಘಲ್ಲನೆ ತಗಲುವ ಜ್ಞಾನದಶೂಲ4

ಮರಹುಮದಗಳೆಂಬ ಮುಸುಕಿದ ಮೆಳೆಯುಪರದಾರ ಪರನಿಂದೆಯಗ್ನಿಯ ಮಳೆಯು 5

ಬೇಡಿದ ಬಯಕೆ ಸಾಧ್ಯಾಗದ ನೋವುಮೂಢತನದಿ ದಿನ ನೂಕುವ ಸಾವು 6

ಇನ್ನಾರೆ ಸಜ್ಜನ ಸಂಗಕೌಷಧಮುನ್ನ ಕೊಡಿಸೊ ಪ್ರಸನ್ವೆಂಕಟ ಮುಕುಂದ 7
********