Showing posts with label ಏನೆಂಬೆ ನಿಮ್ಮ ಕರುಣವು ದೇವವರ್ಯ ಶ್ರೀಮದಾನಂದತೀರ್ಥಾರ್ಯ ಹರಿಕಾರ್ಯಧುರ್ಯ shree krishna. Show all posts
Showing posts with label ಏನೆಂಬೆ ನಿಮ್ಮ ಕರುಣವು ದೇವವರ್ಯ ಶ್ರೀಮದಾನಂದತೀರ್ಥಾರ್ಯ ಹರಿಕಾರ್ಯಧುರ್ಯ shree krishna. Show all posts

Wednesday, 1 September 2021

ಏನೆಂಬೆ ನಿಮ್ಮ ಕರುಣವು ದೇವವರ್ಯ ಶ್ರೀಮದಾನಂದತೀರ್ಥಾರ್ಯ ಹರಿಕಾರ್ಯಧುರ್ಯ ankita shree krishna

 ..

ಏನೆಂಬೆ ನಿಮ್ಮ ಕರುಣವು ದೇವವರ್ಯ, ಶ್ರೀಮ- ಪ


ದಾನಂದತೀರ್ಥಾರ್ಯ ಹರಿಕಾರ್ಯಧುರ್ಯ ಅ.ಪ.


ವಾರಿಧಿಯ ಗೋಷ್ಪಾದ ನೀರಂತೆ ದಾಟ್ಯಂದುಮಾರು ಮಲೆತಾಕ್ಷನನು ಮುರಿದು ಮೆರೆದೆಸಾರಿ ಬಹ ರಕ್ಕಸರ ಮುರಿದÉೂಟ್ಟಿ ನೀನಿಂದುಮೇರೆಯಿಲ್ಲದ ಭವಾಂಬುಧಿಯ ದಾಟಿಸಿದೆ 1


ದಾನವನಶೋಕವನ ಕಿತ್ತು ಈಡ್ಯಾಡಂದುಶ್ರೀನಾಥಗೆನುತ ಲಂಕೆಯನುರುಪಿದೆಮಾನವರ ಶೋಕವನ ಬೇರೊರಸೆ ಕಿತ್ತಿಂದುದಾನವರಿಹ ಪುರವ ಪೂರೈಸಿ ಮೆರೆದೆ 2


ಬೇಗ ಸಂಜೀವನವ ತಂದಿತ್ತು ಪೊರೆದ್ಯಂದುನಾಗಪಾಶದಿ ನೊಂದ ಕಪಿಕಟಕವಈಗ ಹರಿಭಕುತಿ ಸುಧೆಯ ನೆರೆದು ಪಾಲಿಸಿದೆರಾಗದಿಂ ಭವಪಾಶಬದ್ಧ ಜನರುಗಳನ್ನು 3


ಮೂಲ ರಾಮಾಯಣವ ಪಾಡಿ ಪಾಡಿದೆ ಅಂದುಓಲ್ಯಾಡಿ ಹರಿಭಕ್ತಿ ಸಾಗರದೊಳುಮೂರ್ಲೋಕದೊಳಗೆಲ್ಲ ಅದರ ಸಾರವ ಬೀರಿತೇಲಿಸಿದೆ ಭವಾಬ್ಧಿ ಮಗ್ನ ಜನಗಳನಿಂದು 4


ಹತ್ತು ದಿಕ್ಕನು ಗೆಲಿದು ರಾಜಸೂಯದಿ ಅಂದುಚಿತ್ತೈಸಿ ಹರಿಗಗ್ರ ಪೂಜೆಯನು ಮಾಡಿದೆಹತ್ತೆರಡು ಮತ್ತೊಂದು ದುರ್ಭಾಷ್ಯ ಜರಿದಿಂದು ಬಿತ್ತರಿಸಿದೆ ಭಾಷ್ಯದಿಂದಗ್ರಪೂಜೆಯನು 5


ದ್ರೌಪದಿಯ ಸಂತವಿಟ್ಟಂದು ಮುಡಿ ಪಿಡಿದೆಳೆದಪಾಪಿ ದುಶ್ಶಾಸನನ ಬಸುರನ್ನು ಬಗೆದೆಪಾಪಿ ಜನರುಗಳೆಳೆಯೆ ವೇದಾಂತ ದೇವಿಯರಶ್ರೀಪತಿಗೆ ಸೇರಿಸಿದೆ ಭಾವವರಿದಿಂದು 6


ಅಂದು ಕಲಿಯಂಶ ದುರ್ಯೋಧನನ ಸಂದುಗಳಕುಂದದೆ ಮುರಿದೆ ಗದೆಯಿಂದ ಸದೆದುಇಂದು ಕಲಿಯನನೇಕ ಶಾಸ್ತ್ರ ಶಸ್ತ್ರಗಳಿಂದಕೊಂದೆಳೆದೆ ಹರಿಯ ಮನ್ನೆಯದಾಳು ಭಳಿರೆ 7


ಶ್ರುತಿಪಂಕಜಗಳರಳೆ ಅಜ್ಞಾನ ತತಿಯೋಡೆಗತಿಗಳಡಗೆ ಮಿಥ್ಯವಾದಿ ಖಳರಕುಮತಗಳು ಮುರಿಯೆ ಸತ್ಪಥವು ಕಾಣಿಸಲುವಿತತವಾಯಿತು ನಿನ್ನ ಪ್ರಭೆ ಸೂರ್ಯನಂತೆ 8


ಜ್ಞಾನಚಂದ್ರಿಕೆ ಪೊಳೆಯೆ ಭಕ್ತಿವಾರಿಧಿಯುಕ್ಕೆಮನ ಚಕೋರವು ವಿಷ್ಣುಪದದಿ ನಲಿಯೆದೀನ ಜನ ಭಯವಡಗೆ ತಾಪತ್ರಯಗಳೋಡೆಆನಂದತೀರ್ಥೇಂದು ಶ್ರೀ ಕೃಷ್ಣ ತಾ ಮೆಚ್ಚೆ 9

***