ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಜ ಬಿಂಬಾನನೆ ಕಂಜ ಸತ್ಕೂಲಪರ ಕಂಜ ಸಾಸಿರ ಶಿರನಾ | ತಂದು ತೋರೇ ಪ
ಕೂಡಾ ನಿತ್ಯದಿ ಕ್ರೀಡಿಪನಾ | ನೆತ್ತಿಯೊಳನುಹಾನೆ ಇಪ್ಪಳ ಸಂಗಡ ಅತ್ತಿತ್ತಗಲ ದವನಾ | ಚಿತ್ತೆದೊಲ್ಲಭ ನೈಯನಾ | ಬಂದ ಸತ್ಯ ಶಾಶ್ವತನ ತೋರೆ 1
ಚಿನಿಗಡಿದ ಕುವರನಾ | ಹಿರಿಯಳಿಯನಾ ತಂದೆಯಾ ಪಿತನಾ | ವನವ ಶರಭಿ ಧಾನ | ಶ್ರೀ ವನಜನಾಭನಾ ತಂದು ತೋರೆ 2
ಸರಸಿಜ ಸಖ ಸುತನಾ | ಅಸುರನ ಮಾತೆಯರಸನಾ | ಕರದಿಂದ ಸಂದಿದ್ದ ದೇಹಿಯ ಕೊಳೆ ಭಕ್ತರ ದುರಿತರ್ಹಿಸಿದನಾ | ಗುರುವರ ಮಹಿಪತಿ ಸುತನ ಅಭಯವಿತ್ತು ಪೊರೆವನ ತಂದು ತೋರೆ 3
***