Showing posts with label ಕರವ ಮುಗಿದ ಮುಖ್ಯಪ್ರಾಣ ದುರುಳರ ಸದೆದು gopala vittala KARAVA MUGIDA MUKHYAPRANA DURULARA SADEDU. Show all posts
Showing posts with label ಕರವ ಮುಗಿದ ಮುಖ್ಯಪ್ರಾಣ ದುರುಳರ ಸದೆದು gopala vittala KARAVA MUGIDA MUKHYAPRANA DURULARA SADEDU. Show all posts

Sunday, 5 December 2021

ಕರವ ಮುಗಿದ ಮುಖ್ಯಪ್ರಾಣ ದುರುಳರ ಸದೆದು ankita gopala vittala KARAVA MUGIDA MUKHYAPRANA DURULARA SADEDU



ಕರವ ಮುಗಿದ ಮುಖ್ಯಪ್ರಾಣದುರುಳರ 
ಸದೆದು ಶರಣರ ಪೊರೆಯೆಂದು ||pa||

ಜೀವೇಶರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳಳಿಯೆಂದು ||

ತಾರತಮ್ಯ ಪಂಚಭೇದ ಸತ್ಯವೆಂದುಮಾರುತಮತ ಪೊಂದಿದವರನು ಪೊರೆಯೆಂದು ||

ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದ್ಹಲ್ಲು ಮುರಿಯೆಂದು||

ಪರಿಪರಿ ಭಕ್ತರ ಹೃದಯಕಮಲದಲ್ಲಿನಿರುತ ಮಾಡುವ ಕರ್ಮ ಶ್ರೀಹರಿಗೆ ಅರ್ಪಿತವೆಂದು ||

ಹರಿ ಮಾಡೊ ವ್ಯಾಪಾರ ಬಲ್ಲಕಾರಣದಿಂದಸಿರಿ ಗೋಪಾಲವಿಠಲಗೆರಗಿ ನಿಂದು ||
***

Karava mugida mukyapranadurulara sadedu saranara poreyendu ||pa||

Jivesaraikyavu jagatu mithyavendu^^I vidha peluva mayigalaliyendu ||

Taratamya pancabeda satyavendumarutamata pondidavaranu poreyendu ||

Illi matravu beda alli onde embokshullakara hidid~hallu muriyendu||

Paripari Baktara hrundayakamaladalliniruta maduva karma sriharige arpitavendu ||

Hari mado vyapara ballakaranadindasiri gopalavithalageragi nindu ||
***