Showing posts with label ಕೆಡಿಸುವನಲ್ಲೊ ನೀ ಬಲು ಕರುಣಿ prasannavenkata. Show all posts
Showing posts with label ಕೆಡಿಸುವನಲ್ಲೊ ನೀ ಬಲು ಕರುಣಿ prasannavenkata. Show all posts

Monday, 11 November 2019

ಕೆಡಿಸುವನಲ್ಲೊ ನೀ ಬಲು ಕರುಣಿ ankita prasannavenkata

by ಪ್ರಸನ್ನವೆಂಕಟದಾಸರು
ಕೆಡಿಸುವನಲ್ಲೊ ನೀ ಬಲು ಕರುಣಿ ನನ್ನಕಿಡಿಗೇಡಿತನ ಉಣಿಸಿತು ಭವಣಿ ಪ.

ಹುಸಿಯ ನುಡಿದು ದೆಸೆಗೆಟ್ಟವ ನಾ ನನ್ನಕುಶಲ ಕಲ್ಯಾಣದೊಳಿಟ್ಟ ಕರುಣಿ ನೀಅಸಮ ಚಂಚಲ ಚಿತ್ತವುಳ್ಳವ ನಾ ದುವ್ರ್ಯಸನವಿದಾರಿ ಉದಾರಿಯು ನೀ 1

ಹಗಲರಿತ ಕುಳಿಯೊಳ್ಬಿದ್ದವ ನಾ ಎನ್ನನೆಗಹಿ ನೆಗಹಿ ನೆಲೆಗೊಟ್ಟವ ನೀಬಗೆ ಬಗೆ ದೋಷಾಚರಣ್ಯೆವ ನಾ ಮತ್ತಘ ಸಂಚಿತವನೋಡಿಸುವೆ ನೀ 2

ವಿಷಯದ ಬಯಕೆಲಿ ನವೆದವ ನಾ ಶುದ್ಧಭೇಷಜನಾಗಿಹೆ ಭವರೋಗಕೆ ನೀವಿಷವನುಂಡು ಕಳೆಗೆಡುವವ ನಾ ಪೀಯೂಷವನೆರೆವ ದಯಾವಾರಿಧಿ ನೀ 3

ಅಹಂಕಾರದಲಿ ಬೆರೆತಿದ್ದವ ನಾಶುಭವಹ ನಾಮವನಿತ್ತು ತಿದ್ದುವೆ ನೀಮಹಿಯೊಳಗಮಿತಘ ಸಾಧಕ ನಾ ಎನ್ನಬಹುಕಲುಷವನ ದಾಹಕ ನೀ 4

ಕೆಡಿಸಬೇಕಾದರೆ ತಿರ್ಯಗ್ಯೋನಿಯ ನೀಬಿಡಿಸಿ ವೈಷ್ಣವ ಜನ್ಮಕೆ ತಹೆಯಾಒಡೆಯ ಪ್ರಸನ್ವೆಂಕಟ ದಯಾಳು ನಿನ್ನಒಡಲ ಹೊಕ್ಕವನೆಂದು ನಂಬಿನೆಚ್ಚಲು 5
*******