Showing posts with label ಚರಣ ಕಮಲ ಭಜಿಸೋ ಗೋಪಾಲಕೃಷ್ಣನ karpara narahari. Show all posts
Showing posts with label ಚರಣ ಕಮಲ ಭಜಿಸೋ ಗೋಪಾಲಕೃಷ್ಣನ karpara narahari. Show all posts

Monday, 2 August 2021

ಚರಣ ಕಮಲ ಭಜಿಸೋ ಗೋಪಾಲಕೃಷ್ಣನ ankita karpara narahari

ಚರಣಕಮಲ ಭಜಿಸೋ ಗೋಪಾಲಕೃಷ್ಣನ ಪ


ಮುರಲೀ ವಾದ್ಯದಲಿ ಗೋಪರನ

ತರುಣಿಯರ ಮನವನು

ಮರುಳುಗೊಳಿಸಿದ ಪರಮ ಸುಂದರನ ಧರಿಯೊಳಗೆ

ಭಾಸ್ಕರಪುರ ಸುಮಂದಿರನೆಂದು ಕರೆಸುವನ

ಕರಿರಾಜವರದನ ಅ.ಪ


ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ

ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ

ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ

ವೇಣುಗೋಪಾಲನ 1


ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ

ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ

ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ

ಸಿಂದೂರವರದನ 2


ಕೃಷ್ಣಾ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ

ಸೃಷ್ಟೀಶನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ

ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಠಗರಿಯುವನಾ

ಪರಮೇಷ್ಠಿ ಜನಕನ 3


ಹರಿಮಹಿಮೆ ತಿಳಿಯದೆ ಸುರಪತಿಯ ಮಳೆ

ಗರಿಯೆ ಗೋಗಳನಾ

ರಕ್ಷಣೆಯ ಮಾಡಲು ಕಿರಿಯ ಬೆರಳಲಿ

ಗಿರಿಯ ಧರಿಸಿದನಾ ಇದ

ನರಿತು ಸುರಪನು ಸುರಭಿ ಸಹ ಬಂದೆರಗಿ

ಕೃಷ್ಣನ್ನ ಪೂಜಿಸಲು ಒಲಿದನ 4


ಶರಣಾಗತ ಜನರ ಪೊರೆಯಲು ಬಂದುನಿಂತಿಹನಾ ಕಾ

ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ

ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು

ತುರುಪಾಲ ಕೃಷ್ಣನ 5

****