ರಾಗ ಮುಖಾರಿ ಆದಿತಾಳ
ಶ್ರೀಗೋಪಾಲದಾಸಾರ್ಯ ವಿರಚಿತ
ಗರುಡಾರೂಢ ಶ್ರೀವೇಂಕಟೇಶದೇವರ ಸ್ತೋತ್ರ
ಗರುಡನೇರಿದಾ ಸರಿಸಿಜಾಕ್ಷನು
ಗರುಡನೇರಿದಾ ಸರಸಿಜಾಕ್ಷನು
ಪರಮಪುರುಷ ಪರತತ್ವ ಪರತರ
ಪರಂಜ್ಯೋತಿ ಪರಮ ಪಾವನ್ನ
ಪರತಂತ್ರ ದೂರ ಸಿರಿ ಕೃಷ್ಣ॥ಪ॥
ಮಂಗಳಾಂಗನು ತನ್ನಂಗನೆ ಸಹಿತ
ನಂಗಿಯಿನ ಕೋಟಿ ತಿಂಗಳಂತೊಪ್ಪುತ
ರಂಗು ಮಾಣಿಕದ್ಹಾರಂಗಳು ಧರಿಸಿ
ಅಂಗಾನೆ ಸಾರಲು ಶೃಂಗಾರದಿ
ಭಂಗಾರದ ಗರ್ಭ ಪಿಂಗಳಾಕ್ಷ ಶೇಷ
ಗಂಗಾಧರ ಶತಕಂಗಳಾದಿಸುರ-
ರಂಗನೇರಿಂದಾ ಶ್ರೀರಂಗನ ಸೇವಿಗೆ
ಮುಂಗಟ್ಟಿ ನಿಲ್ಲೆ ನೀಲಾಂಗ ದೇವ॥೧॥
ಮುತ್ತಿನ ಛತ್ರಜ ಹೊತ್ತು ಪಿಡಿಯಲು
ರತ್ನಚಾಮರ ಮಾರುತ್ತನು ಢಾಳಿಸೆ
ಮೃತ್ಯುಂಜಯನು ತಾ ಪತ್ತಾಕಿ ಪಿಡಿಯೆ
ಸುತ್ತ ಮಾಡಿ ದೇವ ಮೊತ್ತರೆಲ್ಲಾ
ಸುತ್ತ ಸನಕ ಸನತ್ಕುಮಾರಾದ್ಯರು
ಭೃತ್ಯ ಗಂಧರ್ವರು ಭಕ್ತ ಸೂರಾದ್ಯರು
ಜತ್ತಾಗಿ ಅರ್ಥಿಲಿ ಥೈಯಾ ಥೈಯಾಯೆಂದು
ನೃತ್ಯವನಾಡಲು ನಿತ್ಯಾನಂದ॥೨॥
ಮೌನಿಗಳು ಸಾಮಗಾನದಿ ಪಾಡುತ
ಧ್ಯಾನದಿನಲಿದು ಆನಂದದಿರೋಮಾಂ-
ಚನಗಳು ವುಬ್ಬಿ ತಾ ನಲಿದಾಡುತ್ತ
ನಾನಾ ಪರಿಸ್ತೋತ್ರವನು ಮಾಡೆ
ಸ್ವಾನಂದಪೂರ್ಣ ಹೇ ದಾನವ ಭಂಜನ
ದೀನರಕ್ಷಕ ಯೇಕಾನಂತನಂತ
ಜ್ಞಾನಿಗಳ ದಿವ್ಯ ಮಾನಸ ಪದ್ಮಕ್ಕೆ
ಭಾನುಯೆನಿಸು ಶ್ರೀನಿವಾಸ॥೩॥
ಸಂಭ್ರಮದಿ ಅಜ ಶಂಭು ಶೇಷ ಕಾಮ
ಜಂಭಾರಿ ಸುರ ಕದಂಬರೊಂದಂಶದಿ
ಅಂಬುಜಾದಿ ಪುಷ್ಪವಂ ಬೆರಸಿ ಸೃಷ್ಟಿ-
ಲಂಬರ ಕುಂಭಿಣೀ ತುಂಬಲಾಗ
ಕಂಬುಕಾಳಿಗಳು ಬೊಂಭೋರಿಡೆ ಜಯಾ
ಯಂಬೊಸುರು ವಾದ್ಯ ಗಂಭೀರದಿ ಹೋ ಹೋ
ಎಂಬರಿವರಿರೆಲ್ಲಾ ಹಂಬಲದಿ ಪಾಡೆ
ಕಂಬುಚಕ್ರಾಂಕಿತ ಅಂಬುಜಾಕ್ಷ॥೪॥
ಶೃತಿ ತೀರ್ಥೋಪನಿಷತ್ತು ಪುರಾಣ ಸಂ-
ಗೀತ ಸ್ವರದಿಂದ ಕ್ರತುಭುಜರು ಅ-
ಮಿತ ಯತಿಗಣ ಸ್ತುತಿಯು ಮಾಡುತ್ತ
ಕ್ಷಿತಿಯೊಳು ಮೊರವುತ್ತ ಬಾರ
ಸತತ ತನ್ನ ಭಕತರ ಮನದ
ವ್ರತ ಸಿದ್ಧಿಯು ಮಾಡುತ್ತ ಅಂಜನಿ ಪ-
ರ್ವತ ನಿವಾಸ ಗೋಪಾಲವಿಠಲ
ಪತಿತ ಪಾವನ್ನ ಜಿತಮೂರ್ತಿ॥೫॥
https://drive.google.com/file/d/1xlRKPSm7Eenlcl9IWRif6FuGMbdxCWsG/view?usp=drivesdk