ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡುವರೇ ಅಂತವಾ|ನೋಡುವರೇ| ಮೂಢ ಪಾಮರನೆಂದುದ್ದರಿಸದೇ ಸುಮ್ಮನೇ ತಾಕೂಡುವುದೇ ಪ
ಜ್ಞಾನ ಧ್ಯಾನ ಮೌನವರಿಯೆ|ಪೂಜೆಯ ನಾ ಮಾಡುವರೇ| ಗಾನ ಮಾನ ಏನೂ ಅರಿಯೆ|ಸ್ತುತಿ ಸ್ತವನ ಪಾಡುವರೇ?1
ಚತುರ ಉತ್ತರ ಮಾತುಗಳರಿಯೆ|ಸತ್ಸಂಗದಿ ಕೂಡುವರೇ| ಇತರ ಯಾತರ ಆತುರನರಿಯೆ|ವರಗಳನಾ ಬೇಡುವರೇ 2
ಹಾವ ಭಾವ ಭಕ್ತಿಗಳರಿಯೇ|ಛಲ ಬಿಂಕವ ಹಿಡಿವರೇ| ದೇವಕಾವುದು ಮಹಿಪತಿ ಸುತ ಪ್ರಭುತವ ದಾಸನ ಮಾಡುವರೇ3
*****