Showing posts with label ನಾರಾಯಣ ನಾರಾಯಣ ಗೋವಿಂದ ಹರಿ ನಾರಾಯಣ ಗೋವಿಂದ purandara vittala NARAYANA NARAYANA GOVINDA HARI NARAYANA GOVINDA DASHAVATARA. Show all posts
Showing posts with label ನಾರಾಯಣ ನಾರಾಯಣ ಗೋವಿಂದ ಹರಿ ನಾರಾಯಣ ಗೋವಿಂದ purandara vittala NARAYANA NARAYANA GOVINDA HARI NARAYANA GOVINDA DASHAVATARA. Show all posts

Friday, 6 December 2019

ನಾರಾಯಣ ನಾರಾಯಣ ಗೋವಿಂದ ಹರಿ ನಾರಾಯಣ ಗೋವಿಂದ purandara vittala NARAYANA NARAYANA GOVINDA HARI NARAYANA GOVINDA DASHAVATARA



ನಾರಾಯಣ ನಾರಾಯಣ ಗೋವಿಂದ
ಹರಿ ನಾರಾಯಣ ನಾರಾಯಣ ಗೋವಿಂದ ||ಪ||

ನಾರಾಯಣ ಗೋವಿಂದ ಗೋವಿಂದ ಮುಕುಂದ
ಪರತರ ಪರಮಾನಂದ ||ಅ||

ಮೊದಲು ಮತ್ಸ್ಯನಾಗಿ ಉದಿಸಿ ಸೋಮನ
ಸದೆದು ವೇದಗಳ ತಂದ ||

ಮಂದರಗಿರಿ ಸಿಂಧುವಿನೊಳಮೃತ
ತಂದು ಭಕ್ತರಿಗುಣಲೆಂದ ||

ಭೂಮಿಯ ಕದ್ದ ಖಳನ ಮರ್ದಿಸಿ
ಆ ಮಹಾ ಸತಿಯಳ ತಂದ ||

ದುರುಳ ಹಿರಣ್ಯಕನ ಕರುಳ ಬಗೆದು
ತನ್ನ ಕೊರಳೊಳಿಟ್ಟ ಬಗೆಯಿಂದ ||

ಪುಟ್ಟನಾಗಿ ಮಹಿ ಕೊಟ್ಟ ಬಲಿಯ ತಲೆ
ಮೆಟ್ಟಿ ತುಳಿದ ಬಗೆಯಿಂದ ||

ಧಾತ್ರಿಯೊಳು ಮುನಿಪುತ್ರನಾಗಿ ಬಂದು
ಕ್ಷತ್ರಿಯರೆಲ್ಲರ ಕೊಂದ ||

ಮಡದಿಗಾಗಿ ಸರಗಡಲನೆ ಕಟ್ಟಿ
ಹಿಡಿದು ರಾವಣನ ಕೊಂದ ||

ಗೋಕುಲದಿ ಹುಟ್ಟಿ ಗೋವ್ಗಳ ಕಾಯ್ದ
ಗೋಪಾಲಕೃಷ್ಣ ತಾ ಬಂದ ||

ಛಲದಲಿ ತ್ರಿಪುರರ ಸತಿಯರ ವ್ರತದ
ಫಲವನಳಿದ ಬಗೆಯಿಂದ ||

ಧರೆಯೊಳು ಪರಮ ನೀಚರ ಸವರೆ
ಕುದುರೆಯೇರಿದ ಕಲಿ ಚಂದ ||

ದೋಷದೂರ ಶ್ರೀಪುರಂದರವಿಠಲ
ಪೋಷಭಕ್ತಸುವೃಂದ ||
****

ರಾಗ ಧನಶ್ರೀ ಆದಿತಾಳ raga in audio may differ