Showing posts with label ಯಶೋದೆ ನಿನ್ನ ಮಗಗಿದು ಥರವೇ pranesha vittala. Show all posts
Showing posts with label ಯಶೋದೆ ನಿನ್ನ ಮಗಗಿದು ಥರವೇ pranesha vittala. Show all posts

Saturday, 16 November 2019

ಯಶೋದೆ ನಿನ್ನ ಮಗಗಿದು ಥರವೇ ankita pranesha vittala

by ಪ್ರಾಣೇಶದಾಸರು
ಯಶೋದೆ ನಿನ್ನ ಮಗಗಿದು ಥರವೇವಸುಧೆಯೊಳಗಿಂಥ ಶಿಶುವಿಲ್ಲವೇ ಪ

ಪೆಟ್ಟಿಗೆಯೊಳುತುಂಬಿರೊಟ್ಟಿಯ ದೇವರು |ಇಟ್ಟನೆ ಕಚ್ಚಿನ ಚಟ್ಟಿಗೆಯೊಳು 1

ಸಡಗರದಿಂದ ಬೆಣ್ಣೆ ಗಡಿಗೆ ಕಾಯಲಿಟ್ಟರೆ |ಬಡಧಾನ ಕೇದಿಗೆ ಪಡಿಯೊಳಗೆ2

ಆ ಸಣ್ಣ ಕರು ತೊಟ್ಟಿಲ ಹಾಸಿಕೆಯೊಳಗಿಟ್ಟು |ಕೂಸು ಸೋರಿಯೊಳಿಟ್ಟುಘಾಸಿಮಾಳ್ಪ 3

ಚಿನ್ನಗುಣಲಿಟ್ಟರೆ ಅನ್ನದೊಳಗಿಟ್ಟನೆ |ಸುಣ್ಣದಕಲ್ಲು ಏನ್ಮಣ್ಣು ಹೇಳಲಿ 4

ನಿದ್ರೆಯೊಳಿರೆ ಸೀರೆ ಒದ್ದಲ್ಲಿ ಬೆಣ್ಣೆಯ |ಮುದ್ದೀನಿಡುವನಿದು ಮುದ್ದುಯೇನೆ 5

ಬೆಕ್ಕಾನಲ್ಲಿಗೆಹಚ್ಚಿಇಕ್ಕಿಸಿ ಚಪ್ಪಾಳೆ |ಇಕ್ಕಿಸುವನೆಹಿಂಡುಚಿಕ್ಕವರನ್ನಾ 6ನನ್ನ ಪ್ರಾಣೇಶ ವಿಠಲನ್ನಾಟ ಈ ಊರೊಳು |ಘನ್ನವಾಯಿತು ಬಿಡಿಸಿನ್ನು ಮಾತ್ರ 7
*******