Showing posts with label ಇಂಥಾ ಗುರುಗಳ ಕಾಣಿನಾ ಭೂತಳದೊಳು shyamasundara INTHA GURUGALA KAANE NAA BHOOTALADOLU. Show all posts
Showing posts with label ಇಂಥಾ ಗುರುಗಳ ಕಾಣಿನಾ ಭೂತಳದೊಳು shyamasundara INTHA GURUGALA KAANE NAA BHOOTALADOLU. Show all posts

Thursday 2 December 2021

ಇಂಥಾ ಗುರುಗಳ ಕಾಣಿನಾ ಭೂತಳದೊಳು ankita shyamasundara INTHA GURUGALA KAANE NAA BHOOTALADOLU



on ರಾಘವೇಂದ್ರ

ಇಂಥಾ ಗುರುಗಳ ಕಾಣಿನಾ | ಭೂತಳದೊಳು
ಇಂಥಾ ಯತಿಗಳ ಕಾಣಿನಾ ಪ

ಇಂಥ ಗುರುಗಳ ಕಾಣಿ \ ಮಂತ್ರ ಮಂದಿರದಲ್ಲಿ
ನಿಂತು ಭಜಕರಿಗೆ | ಚಿಂತೆ ಕಳೆವ ಕರುಣಿ ಅ.ಪ

ದೇವಸ್ವಭಾವನೀತನು | ಸತತ ಪವನ
ದೇವನಾವೇಶಯುಕ್ತನು ||
ಆವ ಸಂಶಯವ್ಯಾಕೆ | ದೇವಾಧಿದೇವ ನರಮೃಗ
ದೇವನೀತನ ಭಕ್ತಿಗೆ | ಧಾವಿಸಿ ಬಂದ ಸ್ತಂಭದಿ
ಭಾವ ಭಕ್ತಿಯಲಿ | ಸೇವಿಪರಿಗೆ ಭವ
ನೋವು ಕಳೆದು ಸುರ | ಗೋವಿನ ತೆರ ವರ
ವೀವನು ಕರುಣದಿ | ಕಾಮನು ಪರಮ
ಪಾವನ ಚರಿತನು | ಕೋವಿದರೊಡೆಯನು 1

ವರಹಜ ತಟದಲ್ಲಿರುವ ಭಕ್ತರು ಕೂಗಿ
ಕರೆದಲ್ಲಿಗೋಡಿ ಬರುವ |
ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ
ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ
ಗರೆದನು ಕರುಣದಿ ಪೊರೆದನು ಪರಮತ
ಮುರಿದನು ಜಗದೋಳ್ ಮೆರೆದನು ಹೊಸ ಹೊಸ
ಪರಿ ಸುಮಹೋತ್ಸವ ಹರುಷದಿ ಪ್ರತಿದಿನ
ಗುರು ಸುಯಮೀಂದ್ರರ | ಕರದಿಂಗೊಂಬರು 2

ಮಂದಹಾಸನ ಶ್ರೀ ಶಾಮಸುಂದರ
ರಂಘ್ರಿ ಸೇವಕ |
ಕಂದರ್ಪಶರಕರಿ ವೃಂದ ಕೇಸರಿ ಎನಿಸಿ
ಗಂಧವಾಹನ ಮತ | ಸಿಂಧುವಿಗೆ ಶಶಿ
ಯಂದದಿ ರಾಜಿಸಿ ವೃಂದಾವನವನು
ಒಂದೆ ಮನದಲಿ ವಂದಿಸಿ ನಮಿಸುವ
ವಂದ್ಯಾಂಧಕರಿಗೆ | ಕಂದರಕ್ಷಿಗಳ
ಕುಂದದಿ ಕೊಡುವ | ಕರ್ಮಂದಿ ಕುಲಾಗ್ರಣಿ 3
***