ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ನೋಡುವರೇನೋ ಕೃಪಾಸಿಂಧು ಶ್ರೀಗುರು ಒಪ್ಪಿಸಿಕೊಂಡರೆ ತಪ್ಪಾರಿಸುವರೆ ಪ
ಒಡಲಹೊಕ್ಕವರವಗುಣವ ನೋಡುವರೇನೊ ಒಡಿಯನೆಂದವರ ತಾ ಕೈಯ್ಯ ಬಿಡುವರೆ ಮಡದಿ ಮಕ್ಕಳೆನಿಸಿ ಕಡೆಗಣ್ಣ ನೋಡುವರೆ ಒಡುಹುಟ್ಟಿದವರಿಗೆರಡ ಬಗೆವರೇನಯ್ಯ 1
ಬಡವರ ಮಕ್ಕಳ ಮಡುವಿನೊಳು ಧುಮುಕಿಸಿ ಕುಡಗೋಲ ಕುಂಬಳ ಕೊಟ್ಟವರ ಕೈಯ್ಯ ಒಡನೆ ಹೋಳುವದುಚಿತವೇನಯ್ಯ 2
ಬಡವನಾಧಾರಿ ಎಂದು ನಾ ನಿಮ್ಮ ಪೊಡವಿಯೊಳು ಶ್ರೀಪಾದ ದೃಢದಲಿ ನೋಡು ಕರುಣಾಲೆನ್ನ ನೀಡಿ ಅಭಯ ಹಸ್ತದಿ ಮೂಢ ಮಹಿಪತಿಗೆ ಕಡೆಗಾಣಿಸುವುದೈಯ್ಯ 3
***