Showing posts with label ಎಲೆ ಮನವೇ ಕೇಳು ಕೇಶವನ purandara vittala. Show all posts
Showing posts with label ಎಲೆ ಮನವೇ ಕೇಳು ಕೇಶವನ purandara vittala. Show all posts

Wednesday, 4 December 2019

ಎಲೆ ಮನವೇ ಕೇಳು ಕೇಶವನ purandara vittala

ಪುರಂದರದಾಸರು
ಎಲೆ ಮನವೇ ಕೇಳು ಕೇಶವನ ನಾಮವ ನುಡಿಸು |ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |ಎಲೆ ಕರ್ಣಗಳಿರ ಅಚ್ಯುತನ ಕಥೆಕೇಳಿ1

ಎಲೆ ನೇತ್ರಗಳಿರ ಶ್ರೀ ಕೃಷ್ಣಮೂರ್ತಿಯ ನೋಡಿ |ಎಲೆ ಪಾದಗಳಿರ ಹರಿಯಾತ್ರೆಯನು ಮಾಡಿ ||ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |ತುಳಸೀ ಪರಿಮಳವನಾಘ್ರಾಣಿಸನುದಿನವು 2

ಎಲೆ ಶಿರವೆ ನೀನಧೋಕ್ಷಜನ ಶ್ರೀ ಚರಣದ |ಜಲರುಹದೊಳಗಳಿಯುಂಟೆ ಲೋಲಾಡು |ಎಲೆ ತನುವೆ ನೀನು ಶ್ರೀ ಪುರಂದರವಿಠಲನ |ಸಲೆ ಭಕುತ ಜನರಂಗ ಸಂಗತಿಯಲಿ ಬಾಳು 3
*******