Showing posts with label ಕಾಯೆ ದುರ್ಗಾಂಭ್ರಣಿಯೆ ಕಾಯೆ ಶ್ರೀ ರುಕ್ಮಿಣಿಯೆ shyamasundara KAAYE DURGAAMBHRANIYE KAAYE SRI RUKMINIYE. Show all posts
Showing posts with label ಕಾಯೆ ದುರ್ಗಾಂಭ್ರಣಿಯೆ ಕಾಯೆ ಶ್ರೀ ರುಕ್ಮಿಣಿಯೆ shyamasundara KAAYE DURGAAMBHRANIYE KAAYE SRI RUKMINIYE. Show all posts

Monday 20 December 2021

ಕಾಯೆ ದುರ್ಗಾಂಭ್ರಣಿಯೆ ಕಾಯೆ ಶ್ರೀ ರುಕ್ಮಿಣಿಯೆ ankita shyamasundara KAAYE DURGAAMBHRANIYE KAAYE SRI RUKMINIYE






ಜಗನ್ಮಾತೆ ಶ್ರೀ ಮಹಾಲಕ್ಷ್ಮೀದೇವಿಯರ ಸ್ತೋತ್ರ ಪದ 

ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ
ಕಾಯೆ ಕಾಯೆ ಶುಭ ಕಾಯೆ ದಯದಿ ಹರಿ
ಕಾಯ ನಿಲಯೆ ವಿಧಿ ಕಾಯಜ ತಾಯೆ ||

ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆ
ಭೀಕರಳೆನಿಸುತ | ವ್ಯಾಕುಲಗೊಳಿಸದೆ
ನೀಕರುಣಿಸು ರತ್ನಾಕರನ ಮಗಳೆ ||

ಸೀತೆ ಸಾರಸನಯನೆ | ಶೀತಾಂಶುವಿನ ಭಗಿನಿ
ಮಾತೆ ನಮಿಪೆ ತವ | ಘಾತಕ ವ್ರಾತದ
ಭೀತೆಯ ತೋರದೆ | ಪ್ರೀತಿಯಿಂದೊಲಿದು ||

ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ
ಈಕ್ಷಣ ಕರುಣಕಟಾಕ್ಷದಿಂದೀಕ್ಷಿಸು
ಪೇಕ್ಷವ ಮಾಡದೆ ಮೋಕ್ಷದಾಯಕಳೆ||

ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ
ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ
ಕುಟಿಲರಹಿತೆ ಶತ | ತಟಿತ ಸನ್ನಿಭಳೆ||

ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ ಸತಿಯೆ
ನಾ ಮೊರೆ ಹೊಕ್ಕೆನು | ಪ್ರೇಮದಿಂದಲಿ |ಸು
ಕ್ಷೇಮಗರೆದು ಮಮಧಾಮದಿ ನೆಲಸೆ ||
***

ರಾಗ : ದುರ್ಗಾ    ತಾಳ : ತ್ರಿತಾಳ (raga, taala may differ in audio)

Kaye durgambraniye | kaye sri rukminiyesuba kaye dayadi hari

Vidhi kayaja taye ||pa||


Makumati srikarale | potana nudi kele

Bhikaralenisuta | vyakulagolisade

Nikarunisu ratnakarana magale ||1||


Seete saarasanayane | shitamshuvina bhagini

Maate namipe tava | gataka vratada

Beeteya torade | pritiyindolidu ||2||


Lakshmikruti shanti aksharale jayavanti

Ikshana karunakavakshadindikshisu

Pekshava madade mokshadayakale||3||


Vatadeleyolu malagiruva | vaturupi patipadava

Pathisutabjasikara | putadi namisuvantha

Kutilarahite Sata | tatita sannibale||4||


Bame sri bhusuteye | shyamasundara satiye

Naa more hokkenu | premadindali |su

kshemagaredu mamadhamadi nelase ||5||

***


ಕಾಯೆ ದುರ್ಗಾಂಭ್ರಣಿಯೆ ।

ಕಾಯೆ ಶ್ರೀ ರುಗ್ಮಿಣಿಯೆ ।। ಪಲ್ಲವಿ ।।


ಕಾಯೆ ಕಾಯೆ ಶುಭ ।

ಕಾಯೆ ದಯದಿ ಹರಿ ।

ಕಾಯ ನಿಲಯೆ ವಿಧಿ ।

ಕಾಯಜ ತಾಯೆ ।। ಅ ಪ ।।


ಮಾ ಕಮಲೆ ಶ್ರೀ ಕರಳೆ -

ಪೋತನ ನುಡಿ ಕೇಳೆ ।

ಭೀಕರಳೆಣಿಸುತ -

ವ್ಯಾಕುಲ ಗೊಳಿಸದೆ । 

ನೀ ಕರುಣಿಸು ।

ರತ್ನಾಕರನ ಮಗಳೆ ।। ಚರಣ ।।


ಸೀತೆ ಸಾರಸನಯನೆ ।

ಶೀತಾಂಶುವಿನ ಭಗಿನಿ ।

ಮಾತೆ ನಮಿಪೆ ।।

ತವ ಘಾತಕ ವ್ರಾತದ ।

ಭೀತಿಯ ತೋರದೆ ।

ಪ್ರೀತಿಯೊಂದೊಲಿದು ।। ಚರಣ ।।


ಲಕ್ಷ್ಮೀ ಕೃತಿ ಕಾಂತಿ ।

ಅಕ್ಷರಳೆ ಜಯವಂತಿ ।

ಈಕ್ಷಣ ಕರುಣ । ಕ ।। 

ಟಾಕ್ಷದಿಂದೀಕ್ಷಿಸು ।

ಪೇಕ್ಷೆಯ ಮಾಡದೆ ।

ಮೋಕ್ಷದಾಯಕಳೆ ।। ಚರಣ ।।


ವಟದೆಲೆಯೊಳು ಮಲಗಿರಲು ।

ವಟು ರೂಪಿ ಪತಿ ಪದವ ।

ಪಠಿಸುತಬ್ಜಸೀ ಕರ ।।

ಪುಟದಿ ನಮಿಸುವಂಥ ।

ಕುಟಿಲ ರಹಿತೆ । ಶತ ।

ತಟಿತ ಸನ್ನಿಭಳೆ ।। ಚರಣ ।।


ಭಾಮೆ ಶ್ರೀ ಭೂಸುತೆಯೆ ।

ಶ್ಯಾಮಸುಂದರ ಸತಿಯೆ ।

ನಾ ಮೊರೆಹೊಕ್ಕೆನು ।।

ಪ್ರೇಮದಿಂದಲಿ । ಸು ।

ಕ್ಷೇಮಗರೆದು ಮಮ ।

ಧಾಮದಿ ನೆಲೆಸು ।। ಚರಣ ।।

***


ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ದುರ್ಗಾ = ತಮೋ ಗುಣಾಭಿಮಾನಿ ದುರ್ಗಾ ನಾಮಕಳು 

ಸುಜೀವಿಗಳಿಗೆ ಸದಾ ಸರ್ವತ್ರ ಅಭಯ ಸ್ಥಾನವಾದ ಕೋಟೆಯಂತೆ ರಕ್ಷಳಾಗಿರುವಳು 

( ಸತಾಮಭಯಭೂಮಿತ್ವಾತ್ )

ಬೃಹದಾರಣ್ಯಕೋಪನಿಷತ್....

ಯಸ್ತಮಸಿ ತಿಷ್ಠನ್ ತಮಸೋs೦ತರೋ 

ಯಂ ತಮೋ ನ ವೇದ

ಯಸ್ಯ ತಮಃ ಶರೀರಂ, 

ಯಸ್ತಮೋs೦ತರೋ ಯಮಯತಿ

ಏಷ ತೇ ಆತ್ಮಾ ಅಂತರ್ಯಾಮ್ಯಮೃತಃ ।।

ಯಾರು ತಮೋ ನಾಮಕಳಾದ ಶ್ರೀ ದುರ್ಗಾದೇವಿಯಲ್ಲಿದ್ದು ಶ್ರೀ ದುರ್ಗಾದೇವಿಯಿಂದ ಭಿನ್ನನೋ, 

ಶ್ರೀ ದುರ್ಗಾದೇವಿಯು ಯಾರನ್ನು ತಿಳಿದಿಲ್ಲವೋ, 

ಶ್ರೀ ದುರ್ಗಾದೇವಿಯು ಯಾರಿಗೆ ಶರೀರದಂತಿರುವಳೋ, 

ಯಾರು ಶ್ರೀ ದುರ್ಗಾದೇವಿಯಲ್ಲಿದ್ದು ಸುಖವನ್ನುಂಟು ಮಾಡುವನೋ ಮತ್ತು ನಿಯಮಿಸುವನೋ ಅವನೇ ನಿನ್ನ ನಿಯಾಮಕನಾದ ಅಂತರ್ಯಾಮಿ...

ತಮೋ ದುರ್ಗಾ ಪ್ರಕೀರ್ತಿತಾ 

ಯತಃ ಸಂಗ್ಲಪಯೇತ್ ಸರ್ವಾಮ್ ।।

ತಮಸ್ = 

ಶ್ರೀ ದುರ್ಗಾದೇವಿಏಕೆಂದರೆ ಪ್ರಳಯ ಕಾಲದಲ್ಲಿ ಎಲ್ಲರಿಗೂ ದುಃಖವನ್ನುಂಟು ಮಾಡುತ್ತಾಳೆ.   

" ದುರ್ಗ "

ದುರ್ಗೇಷು ಗತಸ್ತನ್ನಾಮಾ

ದುಃಖಿಷು ದುಃಖಿಭಿರವಗಮ್ಯತೇ

ದುಃಖೇನ ಚಾವಗತಃ

ಅನವಗತಶ್ಚ ದುಷ್ಟಾನಾಮ್

ಶಿಷ್ಟ ಪಾಲನಾಯ ದುಷ್ಟಾನನಭಿಗಚ್ಛಟಿ ಚ

ಅಪಗಮಯತಿ ದುಃಖಂ ದುರಿತಂ ಚ ।।  

" ಅಂಭ್ರಣೀ "

ಪ್ರಳಯ ಕಾಲದಲ್ಲಿ ನಿರಂತರ ತನ್ನ ಪತಿಯಾದ ಶ್ರೀ ಹರಿಯನ್ನು ವೇದ ವಾಕ್ಕುಗಳಿಂದ ಸ್ತೋತ್ರ ಮಾಡುವ ವೇದಾಭಿಮಾನಿಯಾದ ಶ್ರೀ ಮಹಾಲಕ್ಷ್ಮೀ ರೂಪವೇ " ವಾಕ್ " = ಅಂಭ್ರಣೀ . 

ಅಂ ಅಕಾರ ವಾಚ್ಯಂ ಬ್ರಹ್ಮ - ಅ ಇತಿ ಬ್ರಹ್ಮ ಇತಿ ಶ್ರುತೇ: ಇವನನ್ನು ಭಿಭರ್ತೀತಿ - ಅಂಭ್ರಣೀ. 

" ಅ " ಕಾರ ವಾಚ್ಯನಾದ ಶ್ರೀ ಹರಿಯನ್ನು ಸದಾ ಕಾಲ ಮನಸ್ಸಿನಲ್ಲಿ ಧರಿಸಿರುವವಳು ಅಂಭ್ರಣೀ. 

ಪ್ರಳಯೋದಕದಲ್ಲಿ ಯೋಗ ನಿದ್ರೆಯಲ್ಲಿರುವ ಶ್ರೀ ಹರಿ ಅಂಭ್ರ 

( ಅಂಭಸಿರಮತೆ ಇತಿ ಅಂಭ್ರ: ) - 

ಇಂತಹ ತನ್ನ ಪತಿಯಾದ ಶ್ರೀಮನ್ನಾರಾಯಣನನ್ನು ಸ್ತುತಿಸುವವಳೇ " ಅಂಭ್ರಣೀ ".

" ಅಂಭ್ರ " ಯೆಂದರೆ ಶ್ರೀ ಹರಿಯನ್ನು ಸದಾ ಕಾಲ ಹೃದಯದಲ್ಲಿ ಧರಿಸಿರುವವ ಶ್ರೀ ವಾಯುದೇವ ( ಅಂಭರತೀತಿ ಅಂಭ್ರ: ) - 

ಇಂತಹ ನಿಜ ಭೃತ್ಯರಾದ ಶ್ರೀ ವಾಯುದೇವರ ಸ್ವಾಮಿ ಅಂಭ್ರ: = ಶ್ರೀ ಹರಿ. 

ಶ್ರೀ ಹರಿಯ ಪತ್ನಿ ಅಂಭ್ರಣೀ = ವಾಕ್ ದೇವತೆಯಾದ ಶ್ರೀ ಮಹಾಲಕ್ಷ್ಮೀ 

ಶ್ರೀ ದುರ್ಗಾ ರೂಪಳಾದ ಶ್ರೀ ಮಹಾಲಕ್ಷ್ಮೀದೇವಿಯೇ ಶ್ರೀ ಅಂಭ್ರಣೀ ನಾಮಕಳು. 

ರುಗ್ಮಿಣಿಯೆ = ಶ್ರೀ ಕೃಷ್ಣ ಪರಮಾತ್ಮನ ಪಟ್ಟದರಸಿ 

ಶುಭ ಕಾಯೆ = ಮಂಗಳ ಸ್ವರೂಪಳೇ 

ಹರಿಕಾಯನಿಲಯೆ = ಶ್ರೀ ಹರಿಯ ವಕ್ಷಸ್ಥಳ ವಾಸಿನಿ 

ರತ್ನಾಕರನ ಮಗಳೇ = ಕ್ಷೀರ ಸಾಗರ ಕನ್ನಿಕೆ 

ಶೀತಾಂಶುವಿನ ಭಗಿನಿ = ಚಂದ್ರ ಸಹೋದರಿ 

ಸಾರಸನಯನೆ = ಕಮಲದಳಾಯತಾಕ್ಷಿ 

ಲಕ್ಷ್ಮೀ = ಶ್ರೀ ಹರಿ ಪತ್ನಿ 

ಕೃತೀ = ಪ್ರದ್ಯುಮ್ನನ ಪತ್ನಿ 

ಶಾಂತಿ = ಅನಿರುದ್ಧನ ಪತ್ನಿ 

ಶಾಂತಿ = ಶುಭ ಹಾಗೂ ಮಂಗಳ ಸ್ವರೂಪಳು 

[ ಶಾಂತಿ - ಕಲ್ಯಾಣ ಶಮಯೋ ]

ಅಕ್ಷರಳೆ = ಯಾವ ವಿಧವಾದ ನಾಶ, ದೇಹ ವಿಕಾರವಿಲ್ಲದ " ಅಕ್ಷರ " ನಾಮಕಳು.  

ವಟು ರೂಪಿ = ಬಾಲ ರೂಪಿ ಶ್ರೀ ಹರಿ 

ಅಬ್ಜಸೀಕರಪುಟದಿ = ಕರಕಮಲಗಳಿಂದ ಪೂಜಿಸುತ್ತ 

ಕುಟಿಲ ರಹಿತೆ = ನಿರ್ದೋಷಳೇ 

ಶತತಟಿತಸನ್ನಿಭಳೇ = ಅಸಂಖ್ಯ ಕೋಟಿ ಮಿಂಚಿನ ಕಾಂತಿಯುಳ್ಳ ದೇಹವುಳ್ಳವಳೇ 

ಶ್ರೀ = ಯೆನ್ನ ಸ್ವಸ್ತಿಗಾಗಿ ಅನುಗ್ರಹಿಸಲಿ 

ಭೂಸುತೆಯೆ = ಭೂ ಪುತ್ರಿಯಾದ ಸೀತೆ ( ಪದ್ಮಾವತಿ )

" ಶ್ಯಾಮಸುಂದರ ಸತಿಯೆ "

ಶ್ಯಾಮಸುಂದರ ನಾಮಕನಾದ ಎನ್ನ ಭಿನ್ನ ರೂಪಿಯೇ ಶ್ರೀ ಹರಿ. ಆ ಶ್ರೀ ಹರಿ ಪರಮಾತ್ಮನ ಪಟ್ಟದರಸಿಯಾದ ನೀನು... 

" ಮಮ ಧಾಮದಿ ನೆಲೆಸೆ "

ಯನ್ನ ಹೃದಯ ಮಂದಿರದಲ್ಲಿ ಸ್ಥಿರವಾಗಿ ನೆಲೆಸೆಂದು ಶ್ರೀ ಶ್ಯಾಮಸುಂದರದಾಸರು ನಮ್ಮ ಪರವಾಗಿ ಪ್ರಾರ್ಥಿಸಿದ್ಧಾರೆ.

****