ಹಿಮಗಿರಿಯ ಶಿಖರಗಳ ಬೆಳ್ಳಿ ಮುಗಿಲಿಂದ
ಗಂಗೆಯ ತರಂಗಗಳ ಮರ್ಮರಗಳಿಂದ
ಬಾನ ಬೆಳಕಿನ ಬಯಲ ಮಿನುಗುವೆಡೆಯಿಂದ
ಬಿರುಗಾಳಿ ಭೋರ್ಗರೆವ ಕಡಲ ತಡಿಯಿಂದ
ಹರಸು ಬಾ....ಹರಸು ಬಾ.... ಹರಸು ಬಾ. ವೀರ ಜನನಿ
ಸೊಂಪಾದ ಹೊನ್ನಾದ ಕಾನನಗಳಿಂದ.
ಕಲ್ಪತರು ದೇವದಾರುಗಳ ನೆಲೆಯಿಂದ.
ಪರಿಜಾತ ಸುಗಂಧ ಸಿರಿದಳಿರಿನಿಂದ
ಹೆಸರಿರದ ಹಕ್ಕಿಗಳ ಇನಿದನಿಗಳಿಂದ
ಹರಸು ಬಾ....ಹರಸು ಬಾ.... ಹರಸು ಬಾ. ವೀರ ಜನನಿ
ಬಾಯಾರಿ ಕಂಗೆಟ್ಟ ಮರುಭೂಮಿಯಲ್ಲಿ
ನಿನ್ನ ಕರುಣೆ ಮಳೆಗೆ ಎತ್ತರೆದುರಲ್ಲಿ?
ಫಲ ಪುಷ್ಪಗಳು ತೂಗಿ ಕಣ್ತಣಿಸುವಲ್ಲಿ
ಸ್ವಾತಂತ್ರ್ಯದುತ್ಸವದ ಮುಂಬೆಳಕಿನಲ್ಲಿ.
ಹರಸು ಬಾ....ಹರಸು ಬಾ.... ಹರಸು ಬಾ. ವೀರ ಜನನಿ
ಗುಡಿಯ ಮುಂದಿದೆ ನಿನ್ನ ಎತ್ತರದ ತೇರು
ಸರ್ವ ಜನತೆಯ ಪ್ರಾಣ ಶಕ್ತಿ ಬಾ ಏರು
ಬಿಡುಗಡೆಯ ಹಬ್ಬವಿದು ತೇರನೆಳೆಯುವೆವು
ನಾವೆಲ್ಲರೊಂದಾಗಿ ನಿನಗೆ ಕೈ ಮುಗಿದು
ಹರಸು ಬಾ....ಹರಸು ಬಾ.... ಹರಸು ಬಾ. ವೀರ ಜನನಿ
***