Showing posts with label ಬಿಗಿಯದಿರು ಬಿಗಿಯದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ shree krishna. Show all posts
Showing posts with label ಬಿಗಿಯದಿರು ಬಿಗಿಯದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ shree krishna. Show all posts

Wednesday, 1 September 2021

ಬಿಗಿಯದಿರು ಬಿಗಿಯದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ ankita shree krishna

 ..

ಬಿಗಿಯದಿರು ಬಿಗಿಯದಿರು ಎಲೆ ಮಾನವಾ |

ಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ ||ಪ||


ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆ |

ಶೂರತನದಲಿ ಶಂತನುತನಯನೇನೊ ||

ಸ್ವರದಲಿ ತುಂಬುರನೆ ಗೀತದಲಿ ನಾರದನೆ |

ಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ ||೧||


ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚಂದ್ರನೆ |

ಛಲದಲ್ಲಿ ಋಷಿ ವಿಶ್ವಾಮಿತ್ರನೇನೋ ||

ಬಲದಲ್ಲಿ ವಾಲಿಯೇ ಹಲಧರನೆ ಹಿರಣ್ಯಕನೆ |

ಬಿಲು ವಿದ್ಯದಲಿ ಪರಶುರಾಮನೇ ನೀನು ||೨||


ತ್ಯಾಗದಲಿ ಕರ್ಣನೇ ಭೋಗದಲಿ ಶತಮಖನೆ |

ಯೋಗದಲಿ ಶುಕಸನಕ ಜನಕನೇನೋ ||

ಭಾಗ್ಯದಲಿ ಬಲಿಚಕ್ರವರ್ತಿಯೋ ದಶಶಿರನೊ |

ದೀರ್ಘದಲಿ ಮೇರುವೇ ಮಂದರವೆ ನೀನು ||೩||


ಭಕ್ತಿಯಲಿ ಭರತನೆ ಭಾವದಲಿ ಲಕ್ಷ್ಮಣನೆ |

ಯುಕ್ತಿಯಲಿ ನೀನಿಂದುಸುತನೇನೊ ||

ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆ |

ಮುಕ್ತಿ ಪಡೆವಲ್ಲಿ ಖಟ್ಟಾಂಗರಾಯನೇನೊ ||೪||


ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆ |

ಕೋಪದಲಿ ಮಹೇಶನೇನೋ ನೀನು ||

ತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆ |

ಕೃಪೆಯಲ್ಲಿ ಶ್ರೀ ಕೃಷ್ಣದೇವನೆ ನೀನು ||೫||


ಕೃತಿಕಾರರು

ಶ್ರೀ ವ್ಯಾಸರಾಯರು

***

ಬಿಗಿಯದಿರು ಬಿಗಿಯದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ ಅವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆಶೂರತನದಲಿ ಶಂತನುತನಯನೇನೊಸ್ವರದಲಿ ತುಂಬುರನೆ ಗೀತದಲಿ ನಾರದನೆಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ 1


ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚÀ್ಚಂದ್ರನೆಛÀಲದಲ್ಲಿ ಋಷಿ ವಿಶ್ವಾಮಿತ್ರನೇನೋಬಲದಲ್ಲಿ ವಾಲಿಯೇ ಹಲಧರನೆ ಹಿರಣ್ಯಕನೆಬಿಲು ವಿದ್ಯದಲಿ ಪರಶುರಾಮನೇ ನೀನು 2


ತ್ಯಾಗದಲಿ ಕರ್ಣನೇ ಭೋಗದಲಿ ಶತಮಖನೆಯೋಗದಲಿ ಶುಕಸನಕ ಜನಕನೇನೋಭಾಗ್ಯದಲಿ ಬಲಿಚಕ್ರವರ್ತಿಯೋ ದಶಶಿರನೊದೀರ್ಘದಲಿ ಮೇರುವೇ ಮಂದರವೆ ನೀನು 3


ಭಕ್ತಿಯಲಿ ಭರತನೆ ಭಾವದಲಿ ಲಕ್ಷ್ಮಣನೆಯುಕ್ತಿಯಲಿ ನೀನಿಂದುಸೂತನೇನೊ

ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆಮುಕ್ತಿ ಪಡೆವಲ್ಲಿ ಖಟ್ಟಾಂಗರಾಯನೇನೊ 4


ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆಕೋಪದಲಿ ಮಹೇಶನೇನೋ ನೀನುತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆಕೃಪೆಯಲ್ಲಿ ಶ್ರೀ ಕೃಷ್ಣದೇವನೆ ನೀನು 5

***