Showing posts with label ಮಂಗಳಂ ಕಲ್ಯಾಣ ಸಾಂದ್ರಗೆ jagannatha vittala. Show all posts
Showing posts with label ಮಂಗಳಂ ಕಲ್ಯಾಣ ಸಾಂದ್ರಗೆ jagannatha vittala. Show all posts

Saturday, 14 December 2019

ಮಂಗಳಂ ಕಲ್ಯಾಣ ಸಾಂದ್ರಗೆ ankita jagannatha vittala

ಜಗನ್ನಾಥದಾಸರು
ಮಂಗಳಂ ಕಲ್ಯಾಣ ಸಾಂದ್ರಗೆ ಪ

ವಾದೀಂದ್ರ ಗುರುವರ ಕುವರಗೆ ಮಂಗಳ
ಮೇದಿನಿ ಸುವಿನುತಗೆ ಮಂಗಳ
ಸಾಧಿತ ಸಕಲ ಸುತತ್ವ್ವಗೆ ಮಂಗಳ
ವಾದಿ ವಾರಿದ ಚಂಡ ಪವಮಾನಗೆ 1

ವರಹತನಯ ತೀರ ಧರಣಿ ಧರಾಹ್ವಯ
ಪುರದಿ ವಿರಾಜಿಸುವಗೆ ಮಂಗಳ
ವರದೇಂದ್ರ ಯತಿವರರ ಕಮಲಾರ್ಚಿತ
ಚರಣ ಪಂಕೇಜ ಯುಗ್ಮಗೆ ಮಂಗಳ 2

ಸೂರಿಕುಲೋತ್ತಮ ಶ್ರೀ ರಾಘವೇಂದ್ರ
ಗುರು ಸದ್ವಂಶ ಜಾತಗೆ ಮಂಗಳ
ನಾರದನುತ ಜಗನ್ನಾಥವಿಠಲನ ಕರುಣ
ಪಾತ್ರ ಸಂಯಮಿವರಗೆ ಮಂಗಳ 3
********