..
ಕೃಪಿಗಳೊಳು ನಿನಗುಪಮೆ ಕಾಣೆನೊ ಸದಾ
ಕೃಪಣವತ್ಸಲ ರಾಘವೇಂದ್ರಾ
ಅಪರಿಮಿತ ಪಾಪೌಘ ಸÀಪದಿ ಪೋಗಾಡಿಸಿ ನೀ
ಕೃಪಣ ಕಾಮಿತ ದಾತಾ - ಮನ್ನಾಥಾ ಪ
ಮೋದತೀರ್ಥ ಮತೋದಧಿ ಸಂಜಾತಾ -
ಮೋದ ಸಂಯುಕ್ತ ಸುಧಾ
ಭೋಧಿಸಿ ಚಂದ್ರಿಕ ಭುಧಜನ ವೃಂದಕೆ
ಉದಧಿನಂದನನಂತಿರುವೇ - ನಂದಕರ ಗುರುವೆ 1
ಕ್ಷಿತಿ ತಳದೊಳು ವರ ಯತಿಯ ರೂಪವ ಧರಿಸಿ
ಪತಿತ ಪಾವನನೆನಿಸೀ
ಸತತ ಸುಜನರ ಅತಿಹಿತದಲಿ ಪೊರೆವೊ
ಮತಿವಂತ ಮನದಲೀಗ ಭಜಿಪೆ ತ್ವಚ್ಚರಣ2
ಧಿಟ ಗುರು ಜಗನ್ನಾಥ ವಿಠಲಪಾದ ಹೃತ್ಸಂ -
ಪುಟದಿ ಭಜಿಸುತಲೀ
ಶಿಷ್ಟಜನರ ಮನದಿಷ್ಟಾರ್ಥ ಸಲಿಸುವ ವÀಂ -
ದ್ಯೇಷ್ಟದಾನದಿ ದಕ್ಷಾ - ಕಾಮಿತ ಕಲ್ಪವೃಕ್ಷಾ 3
***