Wednesday, 1 September 2021

ಕೃಪಿಗಳೊಳು ನಿನಗುಪಮೆ ಕಾಣೆನೊ ಸದಾ ಕೃಪಣವತ್ಸಲ ರಾಘವೇಂದ್ರಾ ankita gurujagannatha vittala

..

ಕೃಪಿಗಳೊಳು ನಿನಗುಪಮೆ ಕಾಣೆನೊ ಸದಾ

ಕೃಪಣವತ್ಸಲ ರಾಘವೇಂದ್ರಾ

ಅಪರಿಮಿತ ಪಾಪೌಘ ಸÀಪದಿ ಪೋಗಾಡಿಸಿ ನೀ

ಕೃಪಣ ಕಾಮಿತ ದಾತಾ - ಮನ್ನಾಥಾ ಪ


ಮೋದತೀರ್ಥ ಮತೋದಧಿ ಸಂಜಾತಾ -

ಮೋದ ಸಂಯುಕ್ತ ಸುಧಾ

ಭೋಧಿಸಿ ಚಂದ್ರಿಕ ಭುಧಜನ ವೃಂದಕೆ

ಉದಧಿನಂದನನಂತಿರುವೇ - ನಂದಕರ ಗುರುವೆ 1


ಕ್ಷಿತಿ ತಳದೊಳು ವರ ಯತಿಯ ರೂಪವ ಧರಿಸಿ

ಪತಿತ ಪಾವನನೆನಿಸೀ

ಸತತ ಸುಜನರ ಅತಿಹಿತದಲಿ ಪೊರೆವೊ

ಮತಿವಂತ ಮನದಲೀಗ ಭಜಿಪೆ ತ್ವಚ್ಚರಣ2


ಧಿಟ ಗುರು ಜಗನ್ನಾಥ ವಿಠಲಪಾದ ಹೃತ್ಸಂ -

ಪುಟದಿ ಭಜಿಸುತಲೀ

ಶಿಷ್ಟಜನರ ಮನದಿಷ್ಟಾರ್ಥ ಸಲಿಸುವ ವÀಂ -

ದ್ಯೇಷ್ಟದಾನದಿ ದಕ್ಷಾ - ಕಾಮಿತ ಕಲ್ಪವೃಕ್ಷಾ 3

***

 

No comments:

Post a Comment