..
kruti by ವೀರನಾರಾಯಣ Veeranarayana
ಜಯ ಕೊಲ್ಹಾಪುರ ನಿಲಯೇಶ್ರೀನಿವಾಸನ ಸತಿಯೇ ಸಾಗರರಾಜನ ಸುತೆಯೇನಾರಿಯರೆಲ್ಲದು ಕೂಡಿ ಆರತಿ ಬೆಳಗುವೆವು ಪ
ಬಿಳಿಯ ಪತ್ತಲವುಟ್ಟು ಕಡಗ ಕಂಕಣ ತೊಟ್ಟುಜಡೆಗೆ ಮಲ್ಲೆಯ ಮಾಲೆ ಮುಡಿದಾ ವರಮಹಾಲಕ್ಷ್ಮಿಗೆ 1
ಮರುಗ ಮಲ್ಲಿಗೆ ಜಾಜಿ ಪಾರಿಜಾತದ ಕುಸುಮಸಿರಿಯ ಚರಣಕೆ ಅರ್ಪಿಸಲೆಂದು ಜಯ ಜಯ ಜಯ 2
ಬಡವರಾ ಮನೆತನಕೆ ಅಭಿಮಾನವನ್ನಿಟ್ಟುನಿರುತ ಕಳಶದಿ ಕುಳಿತ ಮಹಾಲಕ್ಷ್ಮೀಗೆ ಹಾಡುತ ಪಾಡುವೆವು 3
ಶುಕ್ರವಾರವು ಇಂದು ನಮ್ಮ ಸದನಕ್ಕೆ ಬಾ ಎಂದುಗದುಗಿನ ವೀರನಾರಾಯಣನ ಅರಸಿಗೆ ಹಾಡುತ ಪಾಡುವೆವು 4
***