..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ಶ್ರೀ ವಿದ್ಯಾಧೀಶರು
ಮುದ್ದು ಮುಖವನು ತೋರೋ ವಿದ್ಯಾಧೀಶಾ
ಬಿದ್ದು ಬೇಡುವೆ ಪಾದ ಪದ್ಮಂಗಳಿಗೆ ಪ.
ಸಾಧನದಗೋಸುಗಕೆ ಮೇದಿನಿಯೊಳ್ ಜನಿಸಿಸಾಧನವ ಕಾಣದೆ ಮೋದಗೊಂಡಿಹೆನುಸಾಧುಜನ ಪ್ರಿಯನೆ ಸಾದರದಿಂದಲಿಭೇದ ಕಂಚಜ್ಞಾನ ಹಾದಿಯನೆ ತೋರುತಲಿ 1
ಧರೆಯ ರಮಣನು ತಾನು ಧೊರೆ ಎಲ್ಲ ಜಗಕೆಂದುಪರಿಪರಿ ಸ್ತುತಿಸುವಾ ಪರಮ ಭಕುತಿಯನಿತ್ತುಪರಿಪಾಲಿಸಬೇಕು ಕರಮುಗಿದು ಪ್ರಾರ್ಥಿಸುವೆಶರಣು ಜನ ಪರಿಪಾಲಾ 2
ನಿರುತ ಸಂಸಾರದೋಳ್‍ವೈರಾಗ್ಯ ಕರುಣಿಸಿ ಕರಪಿಡಿಯೋ ಕರುಣಾಲವಾಲಪರಮ ಪಾವನ ತಂದೆವರದವಿಠಲನಚರಣವನು ಭಜಿಸುವೆನು ಮರುತ ಮತ ಮೋಹನ 3
***