ರಚನೆ: ಹರಪ್ಪನಹಳ್ಳಿ ಭೀಮವ್ವ
ರಾಗ : ನಾಟಕುರಂಜಿ
ಏನಂತಿ ಕಮಲನಾಭನ ಪ್ರಿಯಳೆ ಜಗ-
ದಾನಂತ ಪದುಮನಾಭನ ಭಾರ್ಯಳೆ ಪ
ಕ್ಷೀರ ಸಾಗರತನುಜೆ ಸಿರಿ ಎನ್ನ ಮೊರೆ ಕೇಳೆ
ಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆ
ಬುದ್ಧಿಪೂರ್ವಕವಾಗಿ ಭುವನದೊಡೆಯನ ಪಾದ-
ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ1
ಜನಕಾತ್ಮಜಳೆ ನೀ ಜಗದೇಕ ಸುಂದರಿ
ಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿ
ಸರ್ವಮಂಗಳಕಾರಿ ಪರಮ ಕರುಣದಿ ನೋಡೆ
ವರಲಕ್ಷ್ಮಿ ದಯಮಾಡೆ ವರಗಳನೀಡ್ಯಾಡೆ 2
ಭೀಷ್ಮಕನ ಪುತ್ರಿ ಬಿರುದೇನೆ ಸರಸಿಜನೇತ್ರೆ
ಮೃಡ ಬ್ರಹ್ಮರೊಡೆಯ ಭೀಮೇಶಕೃಷ್ಣನ ಮಿತ್ರೆ
ಪೊಡವಿಗಧಿಕಳೆ ಜಯ ಮೂಡಲಗಿರಿವಾಸಿ
ಬಿಡದೆ ಕೈ ಹಿಡಿದೆನ್ನ ಕಡೆಹಾಯ್ಸೆ ಕಮಲಾಕ್ಷಿ 3
***
Enanti kamalanabana priyale jaga-dananta
padumanabana baryale ||pa||
Siri enna more kele
Siddhavagenag~hele Suddha margava tore
Buddhipurvakavagi buvanadodeyana pada-
Padmadallasakte buddhi keluve santi||1||
Janakatmajale ni jagadeka sumdari
Jagadadhipati vakshasthala asrayale kruti
Sarvamangalakari parama karunadi node
Varalakshmi dayamade varagalanidyade||2||
Bishmakana putri birudene sarasijanetre
Mruda brahmarodeya bimesakrushnana mitre
Podavigadhikale jaya mudalagirivasi
Bidade kai hididenna kadehayse kamalakshi ||3||
***
ದಾನಂತ ಪದುಮನಾಭನ ಭಾರ್ಯಳೆ ||pa||
ಕ್ಷೀರ ಸಾಗರತನುಜೆ ಸಿರಿ ಎನ್ನ ಮೊರೆ ಕೇಳೆ
ಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆ
ಬುದ್ಧಿಪೂರ್ವಕವಾಗಿ ಭುವನದೊಡೆಯನ ಪಾದ-
ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ||1||
ಜನಕಾತ್ಮಜಳೆ ನೀ ಜಗದೇಕ ಸುಂದರಿ
ಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿ
ಸರ್ವಮಂಗಳಕಾರಿ ಪರಮ ಕರುಣದಿ ನೋಡೆ
ವರಲಕ್ಷ್ಮಿ ದಯಮಾಡೆ ವರಗಳನೀಡ್ಯಾಡೆ ||2||
ಭೀಷ್ಮಕನ ಪುತ್ರಿ ಬಿರುದೇನೆ ಸರಸಿಜನೇತ್ರೆ
ಮೃಡ ಬ್ರಹ್ಮರೊಡೆಯ ಭೀಮೇಶಕೃಷ್ಣನ ಮಿತ್ರೆ
ಪೊಡವಿಗಧಿಕಳೆ ಜಯ ಮೂಡಲಗಿರಿವಾಸಿ
ಬಿಡದೆ ಕೈ ಹಿಡಿದೆನ್ನ ಕಡೆಹಾಯ್ಸೆ ಕಮಲಾಕ್ಷಿ ||3||
********