ankita ನರಹರಿವಿಠಲ
ರಾಗ: ಭೂಪ ತಾಳ: ಝಂಪೆ
ವಂದಿಸುವೆ ಸರ್ವದಾ ಸುಂದರ ಗುರು ರಾಘ-
ವೇಂದ್ರ ನಿಮ್ಮಯ ಪಾದವ
ಮಂದಮತಿನಾನಹುದು ತಂದೆ ಸಲಹುವನೆಂ-
ತೆಂದು ನಂಬಿರುವೆ ನಿಜವಾ ದೇವ ಪ
ಬೇಡಿಕೊಂಬೆನು ನಿನ್ನ ಮೂಢನಿವನೆಂದು
ಬೀಸಾಡದಿರು ಭವಶರಧಿಯೊಳು
ಬೇಡಿದ್ದು ಕೊಡುವ ಪ್ರಭು ನೀನಿರಲು ಅನ್ಯರ
ಕಾಡಲಾರೆ ಧರೆಯೊಳು
ಜೋಡಿಸುವೆ ಕರಯುಗ್ಮ
ನೋಡು ನೀ ದಯದಿಂದ ಕೂಡಿಸು ಭಕ್ತರೊಳು
ರೂಢಿಯೊಳು ನಿನ್ಹೊರತು ಕಾಪಾಡಿ ಕಾಯ್ವರ ಕಾಣೆ
ಮೋದಮತ ಕುಮುದಚಂದ್ರ ಗುಣಸಾಂದ್ರ 1
ಮಡದಿಮಕ್ಕಳ ಮೋಹ ಕಡಲಗೊಡಿಯನೆನಿಸಿ
ಒಡಲ ಕ್ಷುಧೆ ತೃಷೆ ಸಹಿಸಿದೆ
ಕಡುದುರಾತ್ಮರ ಬಳಿಯ ಕರ
ಒಡ್ಡಿ ಬಾಯ್ದೆರೆದು ಭಿಡೆಯಿಲ್ಲದಲೆ ಬೇಡಿದೆ
ಕೊಡಹಾಲು ಕೊಡುವಂಥ ಸುರಧೇನು ಇರಲಿನ್ನು ಬ-
ರಡಾವು ನಾ ಬಯಸಿದೆ ಪೊಡವಿಸುರ-
ರೊಡಿಯ ಪಾಲ್ಗಡಲಶಯನನ ನಾಮ
ನುಡಿಸು ನೀ ನಿರಂತರದೊಳು ಪ್ರಭುವೆ 2
ಶಿಷ್ಟಜನಪಾಲ ಗುರುಶ್ರೇಷ್ಠ ನಿಮ್ಮಯ ಮಹಿಮೆ
ಇಷ್ಟೆ ಎಂದ್ಹೇಳಲೊಶವೆ ಜನ ನಿಷ್ಟೆಯಿಂದಲಿ ಶತ
ಅಷ್ಟೋತ್ತರಾ ಜಪಿಸೆ ಮನೋ-
ಭೀಷ್ಟೆಯನು ಪೂರೈಸುವೆ
ಕುಷ್ಟರೋಗಾದಿಗಳು ನಷ್ಟಗೊಳಿಸಿ ಮಹೋ-
ತ್ಕøಷ್ಟಭೀಷ್ಟಜಾನೆನಿಸುವೆ
ಧಿಟ್ಟ ಶ್ರೀನರಹರಿವಿಠಲನ ಸಿಟ್ಟಿಳಿಸಿ
ಪುಟ್ಟಪ್ರಹ್ಲಾದರಾಯಾ ಧೊರಿಯಾ 3
***