Showing posts with label ಕಡುಮುದ್ದು ಮೋಹನನಾದ ಈ ಸೊಬಗ ನ-ಮ್ಮುಡುಪಿನ ಕೃಷ್ಣರಾಯನ ನೋಡು ನೋಡು hayavadana. Show all posts
Showing posts with label ಕಡುಮುದ್ದು ಮೋಹನನಾದ ಈ ಸೊಬಗ ನ-ಮ್ಮುಡುಪಿನ ಕೃಷ್ಣರಾಯನ ನೋಡು ನೋಡು hayavadana. Show all posts

Friday, 3 September 2021

ಕಡುಮುದ್ದು ಮೋಹನನಾದ ಈ ಸೊಬಗ ನ-ಮ್ಮುಡುಪಿನ ಕೃಷ್ಣರಾಯನ ನೋಡು ನೋಡು ankita hayavadana

 ..

ಕಡುಮುದ್ದು ಮೋಹನನಾದ ಈ ಸೊಬಗ ನ-ಮ್ಮುಡುಪಿನ ಕೃಷ್ಣರಾಯನ ನೋಡು ನೋಡು ಪ.


ಬೊಮ್ಮರುದ್ರಾದಿಗಳ ಕಣ್ಗೆಗೋಚರಿಸದನಿರ್ಮಲ ಚಿನ್ಮಯ ಬೊಮ್ಮವೆÉನಮ್ಮ ಚರ್ಮದೃಷ್ಟಿಗಳಿಗೆ ಗಮ್ಯವಾಯಿತ-ಮ್ಮಮ್ಮ ಇನ್ಯಾರ ಪುಣ್ಯವೊ ನೋಡು ನೋಡು 1


ಶುದ್ಧ ಸಿದ್ಧಾಂತವ ಜಗಕೆ ತೋರಿಸಿದಮಧ್ವಮುನಿಗೊಲಿದು ಬಂದಅಬ್ಧಿಜೆಯರಸನೀತನು ತನ್ನಹೊದ್ದಿದರಿಗರ್ಧ ಶರೀರವನೀವನೆ ನೋಡು ನೋಡು 2


ಚೆಲುವ ಪಾದ ಜಾನೂರು ಕಟಿ ನಾಭಿ ಕಿರಿಡೊಳ್ಳು ವಕ್ಷ ಕಂಬುಕಂಧರಬಳ್ಳಿಗೋಲು ಗಲ್ಲ ವಕ್ತ್ರ ನೇತ್ರ ಮೌಳೀಯ ನಲ್ಲಗೊಲ್ಲಪಳ್ಳಿಯ ನೊಲ್ಲದೆ ಬಂದÀನೆ 3


- - - - - - - - - - ಅಲ್ಲಿ ಬೆಣ್ಣೆಗಳ್ಳನೆಂಬೊರಿವನೆಲ್ಲಇಲ್ಲದಿದ್ದರೆಲ್ಲಿಂದೆಲ್ಲಿಗಿಲ್ಲಿಯ ವಾಸ ನೋಡು ನೋಡು 4


ಶ್ರುತಿಗಗೋಚರನೆನಿಪ ಯತಿತತಿಮತಿಗೆ ಮೈಗೊಡದ ಬೊಮ್ಮಪತಿತ ಪಾತಕಿಗಳಿಗೆ ಕ್ಷಿತಿಯೊಳ-ಗತಿ ಸುಲಭವಾಯಿತಿನ್ನು ನೋಡು ನೋಡು 5


ಬಲ್ಲವರೆ ಬಲ್ಲರಿವನ ಈ ಮಹಿಮೆಯದುರ್ಲಭಕ್ಕೆ ದುರ್ಲಭನವಚೆಲ್ವ ಹಯವದನನಾದ ಭಕುತ ಯತಿ-ವಲ್ಲಭನಿಂದಿಲ್ಲಿ ಸುಲಭ ನೋಡು ನೋಡು 6

***