ಇಂದು ಶ್ರೀಗುರುಪಾದಪದ್ಮ ನೋಡುವ
ಎಂದೆಂದು ಬಿಡದೆ ಭಕ್ತಿಭಾವ ಮಾಡುವ ||ಪ||
ಮನವೆಂಬ ಮಂಟಪವನಾಡುವ
ನೆನವು ನವರತ್ನದ ಸಿಂಹಾಸನಿಡುವ
ಜ್ಞಾನಧ್ಯಾನದೆಡಬಲದಿ ಪಿಡಿವ
ಅನುವಾಗಿ ಅನಿಮಿಷದಲಿ ನೋಡುವ ||೧||
ತನುವೆಂಬ ತಾರತಮ್ಯಭಾವ ಮಾಡುವ
ಅನುಭವದಿಂದನುಪಮನ ನೋಡುವ
ಆನಂದವೆಂಬ ಅಭಿಷೇಕವ ಮಾಡುವ
ಮನೋ ಅಭೀಷ್ಟೆಯ ಸುವಸ್ತ್ರ ನೀಡುವ ||೨||
ಬುದ್ಧಿಭಾವನೆಯ ಗಂಧಾಕ್ಷತೆ ಇಡುವ
ಶುದ್ಧ ಸುವಾಸನೆ ಪರಿಮಳ ಮಾಡುವ
ಶಬ್ದ ಸುವಾಕ್ಯದ ಪುಷ್ಪವ ನೀಡುವ
ಸಿದ್ಧಾಂತವೆಂಬುವ ಸುಸೇವೆ ಮಾಡುವ ||೩||
ಪ್ರಾಣಪಂಚದಾ ಪಾದಪೂಜೆಯ ಮಾಡುವ
ಪುಣ್ಯ ಪೂರ್ವಾರ್ಜಿತ ಫಲಗಳಿಡುವ
ಅನೇಕವಾದ ಪರಿಪೂಜೆ ಮಾಡುವ
ಧನ್ಯಧನ್ಯವಾಗುವ ಮುಕ್ತಿ ಬೇಡುವ ||೪||
ನಿರ್ವಿಕಲ್ಪ ನಿಜಮೂರುತಿ ನೋಡುವ
ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ
ಅರುವೆಂಬ ದೀಪದಿ ಏಕಾರ್ತಿ ಮಾಡುವ
ಸರ್ವಕಾಲದಲಿ ಸಂತೋಷಬಡುವ ||೫||
ಜೀವಭಾವವೆಂಬ ನೈವೇದ್ಯವಿಡುವ
ವಿವೇಕುದಕ ಸಮರ್ಪಣೆ ಮಾಡುವ
ತ್ರಿವಿಧ ಗುಣವೆಂಬ ತಾಂಬೂಲ ನೀಡುವ
ಆವಾವ ಪರಿಯ ಪ್ರಾರ್ಥನೆ ಮಾಡುವ ||೬||
ಪಂಚತತ್ವದ ಪಂಚಾರತಿ ಮಾಡುವ
ಚಂಚಲವಿಲ್ಲದೆ ಚಿದ್ಘನ ನೋಡುವ
ಪಂಚಭೂತವೆಂಬ ಆರತಿ ಮಾಡುವ
ಸಂಚಿತಕ್ರಿಯ ಮಂತ್ರಪುಷ್ಪ ನೀಡುವ ||೭||
ದಿವ್ಯಯೋಗ ಭೋಗ ಚೌರ ಢಾಳಿಸುವ
ಅವಲೋಕನೆಯ ಬೀಸಣಿಕೆ ಬೀಸುವ
ಕಾವ ಕರುಣನ ಪಾದ ನಮಿಸುವ
ಭವಬಂಧನದ ಮೂಲ ಛೇದಿಸುವ ||೮||
ನಮ್ರತೆಯೆಂಬ ನಮಸ್ಕಾರ ಮಾಡುವ
ಸಂಭ್ರಮದಿಂದ ಸ್ವಸ್ವರೂಪ ನೋಡುವ
ಪ್ರೇಮಪ್ರೀತೆಂಬ ಪ್ರದಕ್ಷಿಣೆ ಮಾಡುವ
ಜನ್ಮ ಮರಣದ ಹಾದಿಯ ಬಿಡುವ ||೯||
ನಿರ್ಗುಣಾನಂದ ಸ್ವರೂಪ ನೋಡುವ
ನಿಗಮಗೋಚರನೆಂದು ಸ್ತುತಿಪಾಡುವ
ಅಗಣಿತಗುಣ ಸುಕೀರ್ತಿ ಸೂರ್ಯಾಡುವ
ಜಗದೊಳಾನಂದದಿಂದ ನಲಿದಾಡುವ ||೧೦||
ಅನಾಹತವೆಂಬ ಧ್ವನಿವಾದ್ಯ ಮಾಡುವ
ಆನಂದಬ್ರಹ್ಮದೊಳು ಮುಳುಗ್ಯಾಡುವ
ಭಾನುಕೋಟಿ ತೇಜಪ್ರಕಾಶ ನೋಡುವ
ದೀನ ಮಹೀಪತಿ ಸ್ವಾಮೆಂದು ಕೊಂಡಾಡುವ ||೧೧||
********
ಇಂದು ಶ್ರೀ ಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಾವಭಕ್ತಿ ಮಾಡುವ ಧ್ರುವ ಮನವೆಂಬ ಮನಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಙÁ್ಞನಧ್ಯಾನದಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ 1 ತನುವೆಂಬ ತಾರತಮ್ಯಭಾವ ಮಾಡುವ ಅನುಭದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರನೀಡುವ 2 ಬುದ್ಧಿ ಭಾವನೆಯ ಗಂಧಾಕ್ಷತಿಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯವೇ ಪುಷ್ಪವ ನೀಡುವ ಸಿದ್ಧಾಂತವೆಂಬುದೇ ಸುಸೇವೆ ಮಾಡುವ 3 ಪ್ರಾಣ ಪಂಚವೇ ಪಾದಪೂಜೆಯ ಮಾಡುವ ಪುಣ್ಯಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯ ಧನ್ಯವಾಗುವ ಮುಕ್ತಿಬೇಡುವ 4 ನಿರ್ವಿಕಲ್ಪ ನಿಜಮೂರುತಿ ನೋಡುವ ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ ಅರುವೆಂಬ ದೀಪದಿ ಏಕಾರ್ತಿ ಮಾಡುವ ಸರ್ವಕಾಲದಲಿ ಸಂತೋಷಬಡುವ 5 ಜೀವ ಭಾವನೆಂಬ ನೈವೇದ್ಯವಿಡುವ ವಿವೇಕುದಕ ಸಮರ್ಪಣೆ ಮಾಡುವ ತ್ರಿವಿಧಗುಣವೆಂಬ ತಾಂಬೋಲನಿಡುವ ಅವಾವಪರಿಯು ಪ್ರಾರ್ಥನೆ ಮಾಡುವ 6 ಪಂಚತತ್ವದ ಪಂಚಾರತಿ ಮಾಡುವ ಚಂಚಲವಿಲ್ಲದೆ ಚಿದ್ಛನ ನೋಡುವ ಪಂಚಭೂತವೆಂಬಾರತಿ ಮಾಡುವ ಸಂಚಿತಕ್ರಿಯ ಮಂತ್ರಪುಷ್ಪನೀಡುವ 7 ದಿವ್ಯ ಯೋಗ ಭೋಗ ಚೌರ ಢಾಳಿಸುವ ಅವಲೋಕನೆಯ ಬೀಸಣಿಕೆ ಬೀಸುವ ಪಾದ ನಮಿಸುವ ಭವಬಂಧನದ ಮೂಲ ಛೆÉೀದಿಸುವ 8 ನಮ್ರತವೆಂಬ ಸಮಸ್ಕಾರ ಮಾಡುವ ಸಂಭ್ರಮದಿಂದ ಸ್ವಸ್ವರೂಪ ನೋಡುವ ಪ್ರೇಮಪ್ರೀತೆಂಬ ಪ್ರದಕ್ಷಿಣಿ ಮಾಡುವ ಜನ್ಮ ಮರಣದ ಹಾದಿಯು ಬಿಡುವ 9 ನಿರ್ಗುಣದಿಂದ ಸ್ವರೂಪ ನೋಡುವ ನಿಗಮಗೋಚರನೆಂದು ಸ್ತುತಿ ಪಾಡುವ ಅಗಣಿತಗುಣ ಸುಕೀರ್ತಿ ಸೂರ್ಯಾಡುವ ಜಗದೊಳಾನಂದದಿಂದ ನಲಿದಾಡುವ 10 ಅನಾಹತವೆಂಬ ಧ್ವನಿವಾದ್ಯ ಮಾಡುವ ಅನಂದೋ ಬ್ರಹ್ಮದೊಳು ಮುಳಗ್ಯಾಡುವ ಭಾನುಕೋಟಿತೇಜ ಪ್ರಕಾಶ ನೋಡುವ ದೀನಮಹಿಪತಿ ಸ್ವಾಮ್ಯೆಂದು ಕೊಂಡಾಡುವ 11
***